ADVERTISEMENT

ಸಿಎಎ ನಿಯಮಗಳ ಅಧಿಸೂಚನೆಗೆ ಸಿಪಿಐ–ಎಂ ನಾಯಕಿ ಬೃಂದಾ ಕಾರಟ್‌ ವಿರೋಧ

ಏಜೆನ್ಸೀಸ್
Published 12 ಮಾರ್ಚ್ 2024, 10:46 IST
Last Updated 12 ಮಾರ್ಚ್ 2024, 10:46 IST
<div class="paragraphs"><p>ಬೃಂದಾ ಕಾರಟ್‌ </p></div>

ಬೃಂದಾ ಕಾರಟ್‌

   

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳ ಜಾರಿ ಸಂಬಂಧ ದೇಶದಾದ್ಯಂತ ವಿವಿಧ ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ.

ಸಿಪಿಐ (ಎಂ) ನಾಯಕಿ ಬೃಂದಾ ಕಾರಟ್ ಸಿಎಎ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಇದನ್ನು ಸಂಪೂರ್ಣವಾಗಿ ವಿರೋಧಿಸಲು  ಪ್ರಮುಖ ಮೂರು ಕಾರಣಗಳಿವೆ ಎಂದು ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಮೊದಲನೆಯದಾಗಿ, ಇದು ಪೌರತ್ವದ ವ್ಯಾಖ್ಯಾನವನ್ನು ಬದಲಿಸುತ್ತದೆ. ಇದು ಧರ್ಮಾದರಿತ ಮತ್ತು ತಾರತಮ್ಯದಿಂದ ಕೂಡಿದೆ ಎಂದು ಹೇಳಿದ್ದಾರೆ.

ಎರಡನೆಯದಾಗಿ, ಸಿಎಎ ಜಾರಿಯಾಗಿ ನಾಲ್ಕು ವರ್ಷಗಳ ನಂತರ, ಚುನಾವಣೆ ಸಮಯದಲ್ಲಿ ನಿಯಮಗಳ ಬಗ್ಗೆ ಅಧಿಸೂಚನೆ ಹೊರಡಿಸಿರುವುದು ಯಾಕೆ? ಎಂದು ಪ್ರಶ್ನಿಸುವ ಮೂಲಕ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಮೂರನೇಯದಾಗಿ, ಬಿಜೆಪಿಯು ಧ್ರುವೀಕರಣ ಮತ್ತು ವಿಭಜನೆ ರಾಜಕೀಯ ಮಾಡುತ್ತಿದೆ. ಸಿಎಎ ಜಾರಿಯಿಂದ ಸಂವಿಧಾನ ಸ್ವರೂಪಕ್ಕೆ ಧಕ್ಕೆಯಾಗಲಿದೆ. ಹಾಗೂ ಸಿಎಎ ಬಗ್ಗೆ ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರ ನೀಡಿಲ್ಲ ಎಂದು ಬೃಂದಾ ಕಾರಟ್ ವಿರೋಧ ವ್ಯಕ್ತಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆಗೆ ಸಂಸತ್ತು 2019ರ ಡಿಸೆಂಬರ್‌ 11ರಂದು ಅಂಗೀಕಾರ ನೀಡಿತ್ತು. ಅದಕ್ಕೆ ರಾಷ್ಟ್ರಪತಿಯವರು ಮಾರನೆಯ ದಿನವೇ ಅಂಕಿತ ಹಾಕಿದ್ದರು. 2020ರ ಜನವರಿ 10ರಂದು ಕಾಯ್ದೆಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.