ADVERTISEMENT

ಸೀತಾಪುರ ತಲುಪಿದ ರಾಹುಲ್ ಗಾಂಧಿ: ಲಖಿಂಪುರದತ್ತ ಪಯಣ

ಪಿಟಿಐ
Published 6 ಅಕ್ಟೋಬರ್ 2021, 12:34 IST
Last Updated 6 ಅಕ್ಟೋಬರ್ 2021, 12:34 IST
ರಾಹುಲ್ ಗಾಂಧಿ – ಪಿಟಿಐ ಸಂಗ್ರಹ ಚಿತ್ರ
ರಾಹುಲ್ ಗಾಂಧಿ – ಪಿಟಿಐ ಸಂಗ್ರಹ ಚಿತ್ರ   

ಲಖನೌ: ಉತ್ತರ ಪ್ರದೇಶದ ಲಖಿಂಪುರ–ಖೇರಿಯತ್ತ ಪ್ರಯಾಣ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದ್ಯ ಸೀತಾಪುರ ತಲುಪಿದ್ದಾರೆ.

ಲಖಿಂಪುರಕ್ಕೆ ತೆರಳಲು ಮುಂದಾಗಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದದರು. ಸದ್ಯ ಅವರು ಸೀತಾಪುರದಲ್ಲಿದ್ದಾರೆ.

ದೆಹಲಿಯಿಂದ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌, ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಚನ್ನಿ ಜತೆ ಲಖನೌ ವಿಮಾನ ನಿಲ್ದಾಣಕ್ಕೆ ಬಂದ ರಾಹುಲ್ ಅವರನ್ನು ಆರಂಭದಲ್ಲಿ ಪೊಲೀಸ್ ವಾಹನದಲ್ಲಿ ಪ್ರಯಾಣಿಸುವಂತೆ ಸೂಚಿಸಲಾಗಿತ್ತು. ಇದನ್ನು ಪ್ರತಿಭಟಿಸಿ ಅವರು ಧರಣಿ ನಡೆಸಿದ್ದರು. ಬಳಿಕ ಖಾಸಗಿ ವಾಹನದಲ್ಲಿ ತೆರಳಲು ಅವರಿಗೆ ಅನುಮತಿ ದೊರೆತಿತ್ತು.

ADVERTISEMENT

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲಾ ಜತೆ ರಾಹುಲ್ ಅವರು ಲಖಿಂಪುರದತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ತಿಳಿಸಿದ್ದಾರೆ.

‘ನೀವು ನನ್ನನ್ನು ಅಥವಾ ಪ‍್ರಿಯಾಂಕಾರನ್ನು ಜೈಲಿಗಟ್ಟಬಹುದು, ಅದಕ್ಕೆ ಅರ್ಥವಿಲ್ಲ. ಆದರೆ ಜೈಲಿನಲ್ಲಿ ಇರಬೇಕಾದವರನ್ನು ಜೈಲಿಗೆ ಕಳುಹಿಸಿಲ್ಲ. ನೊಂದ ರೈತ ಕುಟುಂಬಗಳನ್ನು ಭೇಟಿಯಾಗದಂತೆ ನಮ್ಮನ್ನು ತಡೆಯಲಾಗುತ್ತಿದೆ’ ಎಂದುರಾಹುಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.