ADVERTISEMENT

ವಿಷದ ಹಾವನ್ನು ನಂಬಬಹುದು ಆದರೆ ಬಿಜೆಪಿಯನ್ನಲ್ಲ: ಸಿಎಂ ಮಮತಾ ಬ್ಯಾನರ್ಜಿ

ಪಿಟಿಐ
Published 4 ಏಪ್ರಿಲ್ 2024, 10:38 IST
Last Updated 4 ಏಪ್ರಿಲ್ 2024, 10:38 IST
<div class="paragraphs"><p>ಮಮತಾ ಬ್ಯಾನರ್ಜಿ </p></div>

ಮಮತಾ ಬ್ಯಾನರ್ಜಿ

   

ಕೂಚ್‌ ಬೆಹಾರ್‌ (ಪಶ್ಚಿಮ ಬಂಗಾಳ): ಬಿಜೆಪಿಯು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ವಿಷಕಾರಿ ಹಾವನ್ನಾದರೂ ನಂಬಬಹುದು; ಬಿಜೆಪಿಯನ್ನಲ್ಲ’ ಎಂದು ಕಿಡಿಕಾರಿದರು.

ಕೂಚ್‌ ಬಿಹಾರ್‌ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಆವಾಸ್‌ ಯೋಜನೆಗೆ ಹೆಸರು ನೋಂದಾಯಿಸುವಂತೆ ಬಿಜೆಪಿ ಹೇಳುತ್ತಿದೆ. ಹೆಸರನ್ನು ಮತ್ತೊಮ್ಮೆ ನೋಂದಾಯಿಸುವುದು ಏಕೆ? ನೀವು ಹೆಸರು ನೋಂದಾಯಿಸಿದರೆ ಮತ್ತೆ ಕೈಬಿಡುತ್ತಾರೆ. ಬಿಜೆಪಿಯವರನ್ನು ನಂಬಬೇಡಿ. ಅವರು ದೇಶವನ್ನು ನಾಶಮಾಡಲು ಹೊರಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಬಿಜೆಪಿ ಸರ್ಕಾರವು ಕೇಂದ್ರದ ಸಂಸ್ಥೆಗಳ ಮೂಲಕ ಹಾಕುತ್ತಿರುವ ಬೆದರಿಕೆಗೆ ಟಿಎಂಸಿ ಬಗ್ಗುವುದಿಲ್ಲ ಎಂಬುದನ್ನು ಪುನರುಚ್ಚರಿಸಿದ ಮಮತಾ, ‘ಗಡಿ ಭದ್ರತಾ ಪಡೆಯವರು ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸಿದರೆ ಪೊಲೀಸರಿಗೆ ದೂರು ಕೊಡಿ’ ಎಂದು ಮಹಿಳೆಯರಿಗೆ ಸೂಚಿಸಿದರು.  

‘ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಒಬ್ಬ ವ್ಯಕ್ತಿಯನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವರನ್ನಾಗಿ ಮಾಡಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಕೂಚ್‌ ಬಿಹಾರ್‌ ಕ್ಷೇತ್ರದಿಂದ ಪುನರಾಯ್ಕೆ ಬಯಿಸಿರುವ ಬಿಜೆಪಿ ಅಭ್ಯರ್ಥಿ ನಿಶಿತ್‌ ಪ್ರಮಾಣಿಕ್ ಅವರ ಹೆಸರು ಹೇಳದೆಯೇ ಟೀಕಿಸಿದರು. ‘ನಮ್ಮ ಪಕ್ಷದಿಂದ ಉಚ್ಚಾಟನೆಯಾಗಿರುವ ವ್ಯಕ್ತಿ, ಈಗ ಬಿಜೆಪಿಯವರಿಗೆ ದೊಡ್ಡ ಆಸ್ತಿ’ ಎಂದು ಲೇವಡಿ ಮಾಡಿದರು.

‘ಸಿಎಎ ಅಥವಾ ಎನ್‌ಆರ್‌ಸಿಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೊಳಿಸಲು ನಾವು ಅವಕಾಶ ನೀಡುವುದಿಲ್ಲ’ ಎಂಬುದನ್ನು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.