ADVERTISEMENT

ಕೇರಳ | ಕೋವಿಡ್‌ ಹಾವಳಿ, ಗುರುವಾಯೂರ್‌ ಶ್ರೀಕೃಷ್ಣ ದೇವಸ್ಥಾನ ಬಂದ್‌

ವ್ಯಕ್ತಿ ಸಾವು, 78 ಹೊಸ ಪ್ರಕರಣ

ಪಿಟಿಐ
Published 13 ಜೂನ್ 2020, 14:18 IST
Last Updated 13 ಜೂನ್ 2020, 14:18 IST
ಭಕ್ತರಿಗೆ ದರ್ಶನಕ್ಕೆ ಅನುಮತಿ ನೀಡಿದ ನಂತರ ಇತ್ತೀಚೆಗೆ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗಿತ್ತು (ಸಂಗ್ರಹ ಚಿತ್ರ)  – ಪಿಟಿಐ ಚಿತ್ರ
ಭಕ್ತರಿಗೆ ದರ್ಶನಕ್ಕೆ ಅನುಮತಿ ನೀಡಿದ ನಂತರ ಇತ್ತೀಚೆಗೆ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗಿತ್ತು (ಸಂಗ್ರಹ ಚಿತ್ರ)  – ಪಿಟಿಐ ಚಿತ್ರ   

ತಿರುವನಂತಪುರ: ಕೋವಿಡ್‌–19ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ಮೃಪಟ್ಟಿದ್ದು, ಹೊಸದಾಗಿ 78 ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ತ್ರಿಶ್ಶೂರ್‌ ಜಿಲ್ಲೆಯ ಗುರುವಾಯೂರಿನ ಪ್ರಸಿದ್ಧ ಶ್ರೀಕೃಷ್ಣ ದೇವಸ್ಥಾನವನ್ನು ಮತ್ತೆ ಬಂದ್‌ ಮಾಡಲು ಕೇರಳ ಸರ್ಕಾರ ನಿರ್ಧರಿಸಿದೆ.

‘ತ್ರಿಶ್ಶೂರ್‌ ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ 165 ತಲುಪಿದೆ. ಹೀಗಾಗಿ ಗುರುವಾಯೂರಿನ ದೇವಸ್ಥಾನವನ್ನು ಬಂದ್‌ ಮಾಡಲಾಗಿದ್ದು, ಶನಿವಾರದಿಂದಲೇ ಅನ್ವಯವಾಗುವಂತೆ ಭಕ್ತರಿಗೆ ಪ್ರವೇಶ ನೀಡಿಲ್ಲ’ ಎಂದು ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ.

ಭಕ್ತರಿಗೆ ಕಳೆದ ಭಾನುವಾರದಿಂದಲೇ ದೇವಸ್ಥಾನಕ್ಕೆ ಪ್ರವೇಶಕ್ಕೆ ಅನುಮತಿ ನೀಡಲು ಸರ್ಕಾರ ತೀರ್ಮಾನಿಸಿತ್ತು. ದೇವಸ್ಥಾನದ ತಂತ್ರಿ, ಕೊರೊನಾ ಸೋಂಕು ಹರಡುವ ಆತಂಕ ವ್ಯಕ್ತಪಡಿಸಿದ ಕಾರಣ ಈ ನಿರ್ಧಾರವನ್ನು ಮುಂದೂಡಲಾಗಿತ್ತು.

ADVERTISEMENT

ನಂತರ, ದೇವಸ್ಥಾನವನ್ನು ಭಕ್ತರಿಗೆ ಮಂಗಳವಾರ ಮುಕ್ತಗೊಳಿಸಿದ್ದರೂ, ದರ್ಶನಕ್ಕೆ ಬರುವವರ ಸಂಖ್ಯೆ ಕಡಿಮೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.