ADVERTISEMENT

ಆರು ದಿನದಲ್ಲಿ 10 ಲಕ್ಷ ಡೋಸ್‌ ಲಸಿಕೆ: ಆರೋಗ್ಯ ಸಚಿವಾಲಯ

ಪಿಟಿಐ
Published 24 ಜನವರಿ 2021, 10:09 IST
Last Updated 24 ಜನವರಿ 2021, 10:09 IST
ಲಸಿಕೆ– ಪ್ರಾತಿನಿಧಿಕ ಚಿತ್ರ
ಲಸಿಕೆ– ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್‌ 19ರ ಲಸಿಕೆಯ ಹತ್ತು ಲಕ್ಷ ಡೋಸ್ ಅನ್ನು ಆರು ದಿನಗಳಲ್ಲಿ ನೀಡಲಾಗಿದೆ. ಈ ಸಂಖ್ಯೆ ಅಮೆರಿಕ ಮತ್ತು ಬ್ರಿಟನ್‌ಗಿಂತಲೂ ಹೆಚ್ಚಿನದ್ದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಲಸಿಕೆ ಪಡೆದ ಫಲಾನುಭವಿಗಳ ಸಂಖ್ಯೆ ಭಾನುವಾರದ ವೇಳೆಗೆ ಅಂದಾಜು 16 ಲಕ್ಷ ಆಗಿತ್ತು.

ಬ್ರಿಟನ್‌ ಈ ಗುರಿ ಸಾಧನೆಗೆ 18 ದಿನ ತೆಗೆದುಕೊಂಡರೆ, ಅಮೆರಿಕ 10 ದಿನ ತೆಗೆದುಕೊಂಡಿತ್ತು. ಜನವರಿ 24ರ ಬೆಳಿಗ್ಗೆ 8 ಗಂಟೆವರೆಗೂ 15.82 ಲಕ್ಷ ಫಲಾನುಭವಿಗಳಿಗೆ ಲಸಿಕೆ ನೀಡಸಲಾಗಿದೆ. ದೇಶದಾದ್ಯಂತ ಲಸಿಕೆ ನೀಡುವ ಒಟ್ಟು 27,920 ಕಾರ್ಯಕ್ರಮಗಳು ಈ ಅವಧಿಯಲ್ಲಿ ಜರುಗಿವೆ ಎಂದು ತಿಳಿಸಿದೆ.

ತಂತ್ರಜ್ಞಾನದ ನೆರವಿನಲ್ಲಿ ತ್ವರಿತಗತಿಯಲ್ಲಿ ಲಸಿಕೆ ನೀಡುವ ಕಾರ್ಯ ನಡೆದಿದ್ದು, ಇದೇ ಅವಧಿಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಗಿದೆ. ಸದ್ಯ, ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.84 ಲಕ್ಷ ಇದ್ದು, ಇವು ಒಟ್ಟು ಪ್ರಕರಣಗಳಲ್ಲಿ ಶೇ 1.73ರಷ್ಟು ಆಗಿದೆ ಎಂದು ತಿಳಿಸಿದರು.

ADVERTISEMENT

ಕಳೆದ 24 ಗಂಟೆಗಳ ಅವಧಿಯಲ್ಲಿ 15,948 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯು 1,254ರಷ್ಟು ಇಳಿದಿದೆ. ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ 75ರಷ್ಟು ಪ್ರಕರಣಗಳು ಕೇರಳ, ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಇವೆ ಎಂದು ಸಚಿವಾಲಯ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.