ಮುಂಬೈ: ಲೊನಾವಲಾದ ಮುಂಬೈ -ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ಬೆಳಗ್ಗೆಈರುಳ್ಳಿ ಹೇರಿಕೊಂಡು ಬರುತ್ತಿದ್ದ ಲಾರಿಯೊಂದುವಲ್ವಾನ್ ಸೇತುವೆಯಿಂದ 40 ಅಡಿ ಕೆಳಗೆ ಬಿದ್ದು ಸಂಭವಿಸಿದ ಅಪಘಾತದಲ್ಲಿಲಾರಿಚಾಲಕತೀವ್ರ ಗಾಯಗೊಂಡಿದ್ದಾರೆ.
ಆ ಹೊತ್ತಿಗೆ ಘಟನಾಸ್ಥಳಕ್ಕೆ ಧಾವಿಸಿದ ಜನರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಾಲಕನಿಗೆ ಸಹಾಯ ಮಾಡುವ ಬದಲು ಈರುಳ್ಳಿ ಬಾಚಿಕೊಳ್ಳಲು ಮುಗಿಬಿದ್ದಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ ಚಾಲಕನನ್ನು ರಕ್ಷಿಸುವ ಬದಲು ಅಲ್ಲಿದ್ದ ಜನರು ಚೀಲಗಳನ್ನು ತಂದು ಈರುಳ್ಳಿ ಬಾಚಿಕೊಂಡು ಹೋಗುವುದರಲ್ಲಿ ಮಗ್ನರಾಗಿದ್ದರು.
ಗಾಯಗೊಂಡ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗಾಯಾಳುವಿಗೆ ಸಹಾಯ ಮಾಡದೆ ಈರುಳ್ಳಿ ಬಾಚಿಕೊಂಡು ಹೋಗಿದ್ದ ಜನರ ವಿರುದ್ಧ ಲೊನವಲಾ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದು ಸುದ್ದಿಮೂಲಗಳು ಹೇಳಿವೆ.
ನಿಯಂತ್ರಣ ತಪ್ಪಿದ ಲಾರಿ ಸೇತುವೆಯಿಂದ ಕೆಳಗೆ ಬಿದ್ದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.