
ಕಿರಣ್ ರಿಜಿಜು
ನವದೆಹಲಿ: ‘ಭಾರತ ಎಳೆದ ಕೆಂಪು ಗೆರೆಯನ್ನು ಪಾಕಿಸ್ತಾನ ಯಾವಾಗ ದಾಟಿತೋ ಆಗಲೇ ಉಗ್ರರ ಶಿಬಿರಗಳಿಗೆ ಬೆಂಕಿ ಬಿದ್ದಿದೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಕುರಿತ ಚರ್ಚೆ ನಿಗದಿಯಾಗಿದೆ. ಅದಕ್ಕೂ ಮುನ್ನ ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಆಪರೇಷನ್ ಸಿಂಧೂರ ಕುರಿತ ಚರ್ಚೆ ಇಂದು ಆರಂಭವಾಗಲಿದೆ. ಯಾವಾಗ ರಾವಣ ಲಕ್ಷ್ಮಣ ರೇಖೆಯನ್ನು ದಾಟಿದನೋ, ಆಗ ಲಂಕೆಗೆ ಬೆಂಕಿ ಬಿದ್ದಿತು. ಅದೇ ರೀತಿ ಪಾಕಿಸ್ತಾನ ಭಾರತ ಎಳೆದ ಗೆರೆಯನ್ನು ಯಾವಾಗ ದಾಟಿತೋ, ಉಗ್ರರ ಶಿಬಿರಗಳಿಗೆ ಬೆಂಕಿ ಬಿದ್ದಿತು’ ಎಂದು ಬರೆದುಕೊಂಡಿದ್ದಾರೆ.
ಲೋಕಸಭೆಯಲ್ಲಿ ಭಾರತದ ಬಲಿಷ್ಠ, ಯಶಸ್ವಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ವಿಶೇಷ ಚರ್ಚೆಯನ್ನು ನಡೆಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ಸಜ್ಜಾಗಿದ್ದಾರೆ.
ಇನ್ನೊಂದೆಡೆ ‘ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಯುದ್ಧವನ್ನು ತಪ್ಪಿಸಲು ಕದನ ವಿರಾಮಕ್ಕೆ ನಾನು ಮಧ್ಯಸ್ಥಿಕೆ ವಹಿಸಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯ ಕುರಿತು ಪ್ರಶ್ನಿಸಲು ವಿಪಕ್ಷಗಳು ಕಾದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.