ನವದೆಹಲಿ: ‘ಆಪರೇಷನ್ ಸಿಂಧೂರ ಅಡಿಯಲ್ಲಿ, ನಾವು ಯೋಜಿಸಿದಂತೆ ದಾಳಿ ಮಾಡಲು ಗುರುತಿಸಲಾಗಿದ್ದ ಎಲ್ಲ ಸ್ಥಳಗಳನ್ನೂ ನಾಶಪಡಿಸಲಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದರು.
ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 50 ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಸಮಾರಂಭದಲ್ಲಿ ಸಿಂಗ್ ಮಾತನಾಡಿದರು.
‘ಭಯೋತ್ಪಾದಕರ ತರಬೇತಿ ಶಿಬಿರಗಳನ್ನು ನಾಶಪಡಿಸುವ ಮೂಲಕ ಭಾರತವು ಸರಿಯಾದ ಉತ್ತರ ನೀಡಿದೆ’ ಎಂದರು.
‘ತನ್ನ ನೆಲದಲ್ಲಿ ನಡೆದ ದಾಳಿಗೆ ಪ್ರತಿಕ್ರಿಯಿಸುವ ಹಕ್ಕನ್ನು ಭಾರತ ಚಲಾಯಿಸಿದೆ ಹಾಗೂ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ನಮ್ಮ ಮುಗ್ಧ ಜನರನ್ನು ಕೊಂದವರನ್ನು ಮಾತ್ರ ನಾವು ಕೊಂದಿದ್ದೇವೆ. ಭಯೋತ್ಪಾದಕರ ಆತ್ಮಸ್ಥೈರ್ಯವನ್ನು ಮಟ್ಟಹಾಕುವ ಗುರಿಯೊಂದಿಗೆ ಅವರ ಅಡಗುತಾಣಗಳ ಮೇಲಷ್ಟೇ ದಾಳಿ ಮಾಡಲಾಗಿದೆ’ ಎಂದು ಹೇಳಿದರು.
ಭಾರತೀಯ ಸೇನೆಯು ನಿಖರತೆ ಜಾಗರೂಕತೆ ಹಾಗೂ ಸೂಕ್ಷ್ಮತೆಯಿಂದ ಕಾರ್ಯ ನಿರ್ವಹಿಸಿದೆ. ಯಾವುದೇ ನಾಗರಿಕರಿಗೆ ನಮ್ಮ ದಾಳಿಯಿಂದ ತೊಂದರೆಯುಂಟಾಗಿಲ್ಲ. ನಮ್ಮ ಸಶಸ್ತ್ರ ಪಡೆಗಳ ಶೌರ್ಯಕ್ಕೆ ನನ್ನ ಸೆಲ್ಯೂಟ್– ರಾಜನಾಥ್ ಸಿಂಗ್ ರಕ್ಷಣಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.