ADVERTISEMENT

ಆಪರೇಷನ್ ಸಿಂಧೂರದ ವೇಳೆ 4–5 ಯುದ್ಧವಿಮಾನಗಳನ್ನು ಕಳೆದುಕೊಂಡ ಪಾಕ್: IAF ಮುಖ್ಯಸ್ಥ

ಪಿಟಿಐ
Published 3 ಅಕ್ಟೋಬರ್ 2025, 13:21 IST
Last Updated 3 ಅಕ್ಟೋಬರ್ 2025, 13:21 IST
<div class="paragraphs"><p>ವಾಯುಪಡೆ ಮುಖ್ಯಸ್ಥ&nbsp;ಏರ್‌ ಚೀಫ್‌ ಮಾರ್ಷಲ್‌ ಎ.ಪಿ. ಸಿಂಗ್‌ </p></div>

ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಎ.ಪಿ. ಸಿಂಗ್‌

   

ಕೃಪೆ: ಪಿಟಿಐ

ನವದೆಹಲಿ: ಭಾರತ ಸ್ಪಷ್ಟ ಉದ್ದೇಶಗಳೊಂದಿಗೆ ಆಪರೇಷನ್‌ ಸಿಂಧೂರ ಆರಂಭಿಸಿತ್ತು. ಗುರಿ ಸಾಧನೆ ಬಳಿಕ ಕಾರ್ಯಾಚರಣೆ ನಿಲ್ಲಿಸಿದ್ದು ಜಗತ್ತಿಗೆ ಸಂದೇಶ ಸಾರಿದೆ ಎಂದು ವಾಯುಪಡೆ (ಐಎಎಫ್‌) ಮುಖ್ಯಸ್ಥ ಎ.ಪಿ. ಸಿಂಗ್‌ ಶುಕ್ರವಾರ ತಿಳಿಸಿದ್ದಾರೆ.

ADVERTISEMENT

ವಾಯುಸೇನೆ ದಿನದ (ಅ.8) ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಏರ್‌ ಚೀಫ್‌ ಮಾರ್ಷಲ್‌ ಸಿಂಗ್‌, ಐಎಎಫ್‌ 2047ರ ಹೊತ್ತಿಗೆ ತನ್ನ ಯುದ್ಧ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಾರ್ಗಸೂಚಿ ಸಿದ್ಧಪಡಿಸಿಕೊಂಡಿದೆ ಎಂದಿದ್ದಾರೆ.

‘ಆಪರೇಷನ್‌ ಸಿಂಧೂರ' ಸಮಯದಲ್ಲಿ ಪಾಕಿಸ್ತಾನಕ್ಕೆ ಆಗಿರುವ ಹಾನಿಯ ಕುರಿತು, ಒಂದು ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆ, ವಿಮಾನ ಹಾಗೂ ನಾಲ್ಕರಿಂದ ಐದು ಯುದ್ಧವಿಮಾನಗಳ ನಾಶವಾಗಿರುವುದಕ್ಕೆ ಪುರಾವೆಗಳಿವೆ ಎಂದು ಒತ್ತಿ ಹೇಳಿದ್ದಾರೆ.

ಪಾಕಿಸ್ತಾನದ ರಡಾರ್‌ಗಳು, ಕಮಾಂಡ್‌–ಕಂಟ್ರೋಲ್‌ ಕೇಂದ್ರಗಳು, ರನ್‌ ವೇಗಳ ಮೇಲೂ ದಾಳಿ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಏಪ್ರಿಲ್‌ 22ರಂದು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಪಡೆಗಳು ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು 'ಆಪರೇಷನ್ ಸಿಂಧೂರ' ಆರಂಭಿಸಿತ್ತು. ಇದರ ಬೆನ್ನಲ್ಲೇ, ಪಾಕಿಸ್ತಾನ ಸೇನೆ ಭಾರತದ ಮೇಲೆ ದಾಳಿ ಮಾಡಿತ್ತು. ಇದರಿಂದ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ತೀವ್ರಗೊಂಡಿತ್ತು. ಪಾಕ್ ದಾಳಿಯನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು.

ಮೇ 10ರಂದು ಕದನ ವಿರಾಮ ಘೋಷಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.