ADVERTISEMENT

ಒಂದೇ ಚುನಾವಣೆ: ಭಿನ್ನ ಮಾತು, ಬಿಸಿ ಚರ್ಚೆ

ಪಿಟಿಐ
Published 9 ಜನವರಿ 2025, 0:20 IST
Last Updated 9 ಜನವರಿ 2025, 0:20 IST
<div class="paragraphs"><p>ಪಿಟಿಐ ಚಿತ್ರ</p></div>

ಪಿಟಿಐ ಚಿತ್ರ

   

ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತ ಎರಡು ಮಸೂದೆಗಳ ಪರಿಶೀಲನೆಗೆ ರಚನೆ ಆಗಿರುವ ಜಂಟಿ ಸಂಸದೀಯ ಸಮಿತಿಯ ಮೊದಲ ಸಭೆ ಬುಧವಾರ ಬಿರುಸಿನ ಚರ್ಚೆಗೆ ಸಾಕ್ಷಿಯಾಯಿತು.

ಏಕ ಚುನಾವಣೆ ಕಲ್ಪನೆಯು ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನದ ಮೂಲ ಆಶಯದ ಮೇಲಿನ ದಾಳಿ ಎಂದು ವಿಪಕ್ಷಗಳ ಸದಸ್ಯರು ಟೀಕಿಸಿದರೆ, ಬಿಜೆಪಿಯವರು ‘ಇದು, ‘ಜನಮತದ ಕನ್ನಡಿ’ ಎಂದು ಪ್ರತಿಪಾದಿಸಿದರು.

ADVERTISEMENT

ಜಂಟಿ ಸಂಸದೀಯ ಸಮಿತಿಯು ವಿವಿಧ ಪಕ್ಷಗಳ 39 ಸದಸ್ಯರು ಸಭೆ ಯಲ್ಲಿ ಅಭಿಪ್ರಾಯಗಳನ್ನು ದಾಖಲಿಸ ದರು. ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ, ಪ್ರತಿಪಕ್ಷಗಳ ಸದಸ್ಯರು ಒಂದೇ ಬಾರಿ ಚುನಾವಣೆಯಿಂದ ವೆಚ್ಚ ತಗ್ಗಲಿದೆ ಎಂಬ ಪ್ರತಿಪಾದನೆ ಕುರಿತು ಶಂಕೆ ವ್ಯಕ್ತ ಪಡಿಸಿದರು. ‘2004ರಲ್ಲಿ ಲೋಕಸಭೆಯ ಎಲ್ಲ ಸ್ಥಾನಗಳಿಗೆ ಒಂದೇ ಬಾರಿ ಇವಿಎಂ ಬಳಸಿ ಚುನಾವಣೆ ನಡೆದಿತ್ತು. ಇದರ ಖರ್ಚಿನ ಲೆಕ್ಕ ಇದೆಯೇ?’ ಎಂದರು.

ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾಪ ಸಂವಿಧಾನದ ಮೌಲ್ಯ ಗಳಿಗೆ ಪೂರಕವಾಗಿದೆ. ಹಲವು ರಾಜ್ಯಗಳ ವಿಧಾನಸಭೆಯನ್ನು ಅವಧಿಪೂರ್ವ ವಿಸರ್ಜಿಸಿ, ಲೋಕಸಭೆಯ ಜೊತೆಗೆ ಚುನಾವಣೆ ನಡೆಸುವ ಗುರಿಯನ್ನು ಹೊಂದಿದೆ. ವೆಚ್ಚ ತಗ್ಗಲಿದೆ ಎಂದು ಬಿಜೆಪಿ ಸದಸ್ಯರು ಸಮರ್ಥಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

1957ರಲ್ಲಿ ಅವಧಿಪೂರ್ವದಲ್ಲಿ 7 ರಾಜ್ಯಗಳ ವಿಧಾನಸಭೆಗಳನ್ನು ವಿಸರ್ಜಿಸಲಾಗಿತ್ತು. ‘ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್, ನೆಹರೂ ಸರ್ಕಾರದಲ್ಲಿದ್ದ ಹಲವು ಪ್ರಮುಖರು ಸಂವಿಧಾನವನ್ನು ಉಲ್ಲಂಘಿಸಿದ್ದರೆ?’ ಎಂದು ಬಿಜೆಪಿಯ ಸಂಜಯ್‌ ಜೈಸ್ವಾಲ್ ಪ್ರಶ್ನಿಸಿದರು.

‘ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದ ಸಮಿತಿ ಸುಮಾರು 25 ಸಾವಿರ ಜನರ ಅಭಿಪ್ರಾಯ ಆಲಿಸಿದ್ದು, ಹೆಚ್ಚಿನವರು ಏಕಕಾಲದಲ್ಲಿ ಚುನಾವಣೆಗೆ ಬೆಂಬಲಿಸಿದ್ದಾರೆ’ ಎಂದು ಬಿಜೆಪಿಯ ವಿ.ಡಿ. ಶರ್ಮಾ ಹೇಳಿದರು.

‘18 ಸಾವಿರ ಪುಟಗಳ ದಾಖಲೆ’
ಜಂಟಿ ಸಂಸದೀಯ ಸಮಿತಿ ಮೊದಲ ಸಭೆಯಲ್ಲಿ ಎಲ್ಲ ಸದಸ್ಯರಿಗೆ ಮಸೂದೆಗಳ ಕರಡು ಸೇರಿದಂತೆ ಒಟ್ಟು 18 ಸಾವಿರ ಪುಟಗಳಿದ್ದ ಟ್ರಾಲಿ ನೀಡಲಾಯಿತು.  ರಾಮನಾಥ ಕೋವಿಂದ್ ಸಮಿತಿಯ ಹಿಂದಿ ಮತ್ತು ಇಂಗ್ಲಿಷ್ ಅವತರಣಿಕೆಯ ವರದಿ, ವಿವಿಧ ಅನುಬಂಧಗಳ 21 ಸಂಪುಟಗಳು ಇದರಲ್ಲಿ ಸೇರಿದ್ದವು.
ಏಕಕಾಲದ ಚುನಾವಣೆಯಿಂದ ಪ್ರಾದೇಶಿಕ ಪಕ್ಷಗಳು ಕಡೆಗಣನೆಗೆ ಒಳಗಾಗುತ್ತವೆ. ಸ್ಥಳೀಯ ವಿಷಯಗಳು ಚರ್ಚೆಗೆ ಬರುವುದಿಲ್ಲ
ವಿ.ವಿಜಯಸಾಯಿ ರೆಡ್ಡಿ ವೈಎಸ್‌ಆರ್ ಕಾಂಗ್ರೆಸ್
ಮತಪೆಟ್ಟಿಗೆಯನ್ನೇ ಕಸಿಯುವ ಘಟನೆಗಳು ಬಿಹಾರದಲ್ಲಿ ನಡೆದಿವೆ. ಮತಪತ್ರಗಳನ್ನು ಮತ್ತೆ ಬಳಸುವ ಕ್ರಮವನ್ನು ಜಾರಿಗೊಳಿಸುವುದು ತರವಲ್ಲ
ಸಂಜಯ್‌ ಝಾ, ಜೆಡಿಯು
ಏಕ ಚುನಾವಣೆಯ ಮೂಲಕ ಹಣ ಉಳಿಸುವುದಕ್ಕಿಂತಲೂ ಜನರ ಪ್ರಜಾಸತ್ತಾತ್ಮಕವಾದ ಹಕ್ಕುಗಳ ಎತ್ತಿ ಹಿಡಿಯುವುದೇ ಹೆಚ್ಚು ಮುಖ್ಯವಾಗಬೇಕು
ಕಲ್ಯಾಣ್ ಬ್ಯಾನರ್ಜಿ, ಟಿಎಂಸಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.