ADVERTISEMENT

ಮಕರ ಸಂಕ್ರಾಂತಿಗೆ ಸೂರ್ಯ ನಮಸ್ಕಾರ; ಜಮ್ಮುವಿನಲ್ಲಿ ವಿರೋಧ

ಪಿಟಿಐ
Published 14 ಜನವರಿ 2022, 8:20 IST
Last Updated 14 ಜನವರಿ 2022, 8:20 IST
ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರ   

ಶ್ರೀನಗರ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದೊಡ್ಡ ಮಟ್ಟದಲ್ಲಿ ವರ್ಚುವಲ್ ಆಗಿ ಸೂರ್ಯ ನಮಸ್ಕಾರ ಮಾಡುವಂತೆ ಕಾಲೇಜುಗಳಿಗೆ ಜಮ್ಮು ಮತ್ತು ಕಾಶ್ಮೀರದ ಆಡಳಿತವು ನಿರ್ದೇಶನ ನೀಡಿರುವುದು ವಿವಾದಕ್ಕೀಡಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಈ ಕ್ರಮವನ್ನು ವಿರೋಧಿಸಿದ್ದಾರೆ.

'ಮಕರ ಸಂಕ್ರಾಂತಿಯನ್ನು ಆಚರಿಸಲು ಯೋಗ ಸೇರಿದಂತೆ ಯಾವುದನ್ನಾದರೂ ಮಾಡಲು ಮುಸ್ಲಿಂ ವಿದ್ಯಾರ್ಥಿಗಳನ್ನು ಏಕೆ ಒತ್ತಾಯಿಸಬೇಕು? ಮಕರ ಸಂಕ್ರಾಂತಿ ಒಂದು ಹಬ್ಬವಾಗಿದೆ, ಆಚರಿಸಬೇಕೇ ಅಥವಾ ಬೇಡವೇ ಎಂಬುದು ವೈಯಕ್ತಿಕ ಆಯ್ಕೆಯಾಗಬೇಕು. ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಈದ್ ಆಚರಿಸುವಂತೆ ಇದಕ್ಕೆ ಸಮಾನವಾದ ಆದೇಶ ನೀಡಿದರೆ ಬಿಜೆಪಿಗೆ ಸಂತೋಷವಾಗುತ್ತದೆಯೇ ?' ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ನಾಯಕ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

'ಕೇಂದ್ರ ಸರ್ಕಾರದ ದುಷ್ಕೃತ್ಯಗಳು ಕಾಶ್ಮೀರದ ಜನರನ್ನು ಸಮಗ್ರವಾಗಿ ಅನುಮಾನಗೊಳಿಸುವ ಇರಾದೆಯನ್ನು ಹೊಂದಿದ್ದು, ಇದು ಕೋಮುವಾದ ಮನಸ್ಥಿತಿಯನ್ನು ತೋರಿಸುತ್ತಿದೆ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.