
ಮೊಂಥಾ ಚಂಡಮಾರುತ
–ಪಿಟಿಐ ಚಿತ್ರ
ಅಮರಾವತಿ: ಮೊಂಥಾ ಚಂಡಮಾರುತದ ತೀವ್ರತೆ ತಗ್ಗಿದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಮತ್ತು ಹಾನಿಗೊಳಗಾದ ಮೂಲಸೌಕರ್ಯ ಪುನರ್‌ಸ್ಥಾಪಿಸಲು ಆಂಧ್ರ ಪ್ರದೇಶದಲ್ಲಿ 11,000ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ವಿಜಯಾನಂದ ತಿಳಿಸಿದ್ದಾರೆ.
ಗುರುವಾರ ಸಂಜೆಯೊಳಗೆ ವಿದ್ಯುತ್ ಪೂರೈಕೆ ಹಾಗೂ ಇತರೆ ಮೂಲಸೌಲಭ್ಯಗಳು ಪುನರ್ ಸ್ಥಾಪನೆಯಾಗಲಿದವೆ ಎಂದು ಅವರು ಭರವಸೆ ನೀಡಿದರು.
ಒಂಬತ್ತು 220 ಕೆವಿ ಉಪಕೇಂದ್ರಗಳು, ನಾಲ್ಕು 400 ಕೆವಿ ಉಪಕೇಂದ್ರಗಳು ಮತ್ತು ಹನ್ನೊಂದು 132 ಕೆವಿ ಉಪಕೇಂದ್ರಗಳಲ್ಲಿ ಸಮಸ್ಯೆಗಳು ವರದಿಯಾಗಿದ್ದು, ಅವುಗಳನ್ನು ತಕ್ಷಣ ಪರಿಹರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.