ADVERTISEMENT

ಭಾವಚಿತ್ರವುಳ್ಳ ಗುರುತು ಚೀಟಿ ಇಲ್ಲದ 3.83 ಲಕ್ಷ ಜನರಿಗೂ ಲಸಿಕೆ: ಕೇಂದ್ರ ಸರ್ಕಾರ

ಪಿಟಿಐ
Published 30 ಜುಲೈ 2021, 12:29 IST
Last Updated 30 ಜುಲೈ 2021, 12:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾವಚಿತ್ರವುಳ್ಳ ಗುರುತುಚೀಟಿ ದಾಖಲೆಯು ಇಲ್ಲದಿದ್ದ 3.83 ಲಕ್ಷಕ್ಕೂ ಅಧಿಕ ಜನರಿಗೆ ಕೋ–ವಿನ್ ಮೂಲಕ ಜುಲೈ 26ರವರೆಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ತಿಳಿಸಿದ್ದಾರೆ.

ಭಾರತದಲ್ಲಿ ಲಸಿಕೆ ಪಡೆದಿರುವ ಎಲ್ಲ ಫಲಾನುಭವಿಗಳು ಕೋ–ವಿನ್‌ ಪೋರ್ಟಲ್‌ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಲೋಕಸಭೆಯಲ್ಲಿ ಶುಕ್ರವಾರ ನೀಡಿದ ಲಿಖಿತ ಉತ್ತರದಲ್ಲಿ ಅವರು ಹೇಳಿದ್ದಾರೆ.

ಫೋಟೊ ಗುರುತಿನ ಚೀಟಿ ಇಲ್ಲದವರಿಗೆ ಲಸಿಕೆ ನೀಡಲು ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. ಡಿಜಿಟಲ್‌ ತಂತ್ರಜ್ಞಾನದ ಸೌಲಭ್ಯವಿರದ ಜನರು ಕೋವಿಡ್‌ ಲಸಿಕೆ ಕೇಂದ್ರದಲ್ಲಿಯೇ ಹೆಸರು ನೋಂದಣಿ ಮಾಡಿಸಬಹುದಿತ್ತು ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.