ADVERTISEMENT

ಉತ್ತರ ಪ್ರದೇಶ: ಅಂತಿಮ ಹಂತದಲ್ಲಿ ಶೇಕಡ 55ರಷ್ಟು ಮತದಾನ

ಪಿಟಿಐ
Published 7 ಮಾರ್ಚ್ 2022, 16:31 IST
Last Updated 7 ಮಾರ್ಚ್ 2022, 16:31 IST
ಉತ್ತರ ಪ್ರದೇಶದಲ್ಲಿ ಮತದಾನದ ಹಕ್ಕು ಚಲಾಯಿಸಿದ ಮಹಿಳೆ
ಉತ್ತರ ಪ್ರದೇಶದಲ್ಲಿ ಮತದಾನದ ಹಕ್ಕು ಚಲಾಯಿಸಿದ ಮಹಿಳೆ   

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ನಡೆದ ಏಳನೇ ಮತ್ತು ಕೊನೆಯ ಹಂತದ ಮತದಾನದಲ್ಲಿ ಶೇಕಡ 55ರಷ್ಟು ಜನರು ಮತದಾನದ ಹಕ್ಕು ಚಲಾಯಿಸಿದ್ದಾರೆ.

ಗಾಜಿಪುರ್, ವಾರಾಣಸಿ, ಮಿರ್ಜಾಪುರ್‌ ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಒಟ್ಟು ಶೇಕಡ 55.13ರಷ್ಟು ಮತದಾನ ನಡೆದಿರುವುದಾಗಿ ಚುನಾವಣಾ ಆಯೋಗವು ಪ್ರಕಟಿಸಿದೆ. 2017ರ ವಿಧಾನಸಭಾ ಚುನಾವಣೆಯ ಏಳನೇ ಹಂತದಲ್ಲಿ ಶೇಕಡ 59.56ರಷ್ಟು ಮತದಾನ ದಾಖಲಾಗಿತ್ತು.

ಬೆಳಿಗ್ಗೆ 7ಕ್ಕೆ ಆರಂಭವಾದ ಮತದಾನ ಪ್ರಕ್ರಿಯೆಯು ಚಂದೌಲಿ, ರಾಬರ್ಟ್ಸ್‌ಗಂಗ್‌ ಹಾಗೂ ದುದ್ಧಿ ಕ್ಷೇತ್ರಗಳಲ್ಲಿ ಸಂಜೆ 4ಕ್ಕೆ ಮುಕ್ತಾಯವಾಯಿತು. ಉಳಿದ ಕ್ಷೇತ್ರಗಳಲ್ಲಿ ಸಂಜೆ 6ರವರೆಗೂ ಮತದಾನ ಮುಂದುವರಿಯಿತು. ಮತದಾನದ ಅಂತಿಮ ಅಂಕಿ–ಅಂಶಗಳು ಮಂಗಳವಾರ ಲಭ್ಯವಾಗಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಆಜಂಗಢದಲ್ಲಿ ಶೇಕಡ 53.69, ಭದೋಹಿಯಲ್ಲಿ ಶೇಕಡ 54.26, ಚಂದೌಲಿಯಲ್ಲಿ ಶೇಕಡ 61.99, ಗಾಜಿಪುರದಲ್ಲಿ ಶೇಕಡ 55.60, ಜೌನ್‌ಪುರದಲ್ಲಿ ಶೇಕಡ 53.55, ಮವೂನಲ್ಲಿ ಶೇಕಡ 57.02, ಮಿರ್ಜಾಪುರ್‌ನಲ್ಲಿ ಶೇಕಡ 54.93, ಸೋನಭದ್ರಾದಲ್ಲಿ ಶೇಕಡ 58.69 ಹಾಗೂ ವಾರಾಣಸಿಯಲ್ಲಿ ಶೇಕಡ 52.79ರಷ್ಟು ಮತದಾನ ಆಗಿದೆ.

9 ಜಿಲ್ಲೆಗಳ ಒಟ್ಟು 54 ವಿಧಾನಸಭೆ ಸ್ಥಾನಗಳಲ್ಲಿ 613 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಹಲವು ಸಚಿವರು, ರಾಜಕೀಯ ಪಕ್ಷಗಳು ಪ್ರಮುಖ ಮುಖಂಡರ ಭವಿಷ್ಯವು ಇಂದಿನ ಮತದಾನದಲ್ಲಿ ನಿರ್ಧಾರವಾಗಿದೆ.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫಲಿತಾಂಶವು ಮಾರ್ಚ್‌ 10ರಂದು ಪ್ರಕಟವಾಗಲಿದೆ. 2017ರ ವಿಧಾನ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಎಸ್‌ಪಿ 47, ಬಿಎಸ್‌ಪಿ 19 ಕ್ಷೇತ್ರ ಹಾಗೂ ಕಾಂಗ್ರೆಸ್ ಕೇವಲ 7 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.