ADVERTISEMENT

ಹೈದರಾಬಾದ್: ವಿದೇಶಿಯರ ನಿಯೋಗ ಭೇಟಿ

ಪಿಟಿಐ
Published 9 ಡಿಸೆಂಬರ್ 2020, 19:47 IST
Last Updated 9 ಡಿಸೆಂಬರ್ 2020, 19:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್: ಹೈದರಾಬಾದ್‌ನಲ್ಲಿನ ಭಾರತ್ ಬಯೊಟೆಕ್ ಮತ್ತು ಬಯೊಲಾಜಿಕಲ್ ಇ ಲಿಮಿಟೆಡ್‌ನ ಲಸಿಕೆ ಅಭಿವೃದ್ಧಿ ಪ್ರಯೋಗಾಲಯಗಳಿಗೆ64 ದೇಶಗಳ 70ಕ್ಕೂ ಹೆಚ್ಚು ಪ್ರತಿನಿಧಿಗಳ ನಿಯೋಗವು ಭೇಟಿ ನೀಡಿದೆ. ಲಸಿಕೆ ಅಭಿವೃದ್ಧಿ ಮತ್ತು ಲಸಿಕೆ ತಯಾರಿಕೆ ಪ್ರಕ್ರಿಯೆ ಮತ್ತು ಸಾಮರ್ಥ್ಯವನ್ನು ಈ ನಿಯೋಗದ ಸದಸ್ಯರು ಪರಿಶೀಲಿಸಿದ್ದಾರೆ.

64 ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಮತ್ತು ತಜ್ಞರು ಈ ನಿಯೋಗದಲ್ಲಿ ಇದ್ದರು. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಭೇಟಿಯನ್ನು ಆಯೋಜಿಸಿತ್ತು. ಭಾರತ್ ಬಯೊಟೆಕ್‌ ಕಂಪನಿಯು ತನ್ನ ಲಸಿಕೆ ತಯಾರಿಕಾ ಘಟಕಗಳ ಸಾಮರ್ಥ್ಯದ ಬಗ್ಗೆ ನಿಯೋಗದ ಸದಸ್ಯರಿಗೆ ಪ್ರಾತ್ಯಕ್ಷಿಕೆ ನೀಡಿದೆ.

ವಿಶ್ವದಲ್ಲಿ ತಯಾರಾಗುವ ಒಟ್ಟು ಲಸಿಕೆಗಳಲ್ಲಿ ಶೇ 30ರಷ್ಟು ಹೈದರಾಬಾದ್‌ನಲ್ಲೇ ತಯಾರಾಗುತ್ತಿವೆ ಎಂದು ತೆಲಂಗಾಣ ಆರೋಗ್ಯ ಇಲಾಖೆಯು ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.