ADVERTISEMENT

ಕೋಟಿ ಜನರಿಗೆ ಶಿವ ಭೋಜನ್‍ ಯೋಜನೆಯ ಲಾಭ: ಉದ್ಧವ್‍ ಠಾಕ್

ಪಿಟಿಐ
Published 30 ಜೂನ್ 2020, 8:24 IST
Last Updated 30 ಜೂನ್ 2020, 8:24 IST
ಅಡುಗೆ ಸಿದ್ಧತೆ– ಸಾಂದರ್ಭಿಕ ಚಿತ್ರ
ಅಡುಗೆ ಸಿದ್ಧತೆ– ಸಾಂದರ್ಭಿಕ ಚಿತ್ರ   

ಮುಂಬೈ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಿವಭೋಜನ ಯೋಜನೆಯ ಲಾಭ ಒಂದು ಕೋಟಿಗೂ ಅಧಿಕಜನರಿಗೆ ದೊರೆತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‍ ಠಾಕ್ರೆ ಮಂಗಳವಾರ ಹೇಳಿದರು. ಬಡವರಿಗೆ ₹10ರ ದರದಲ್ಲಿ ಊಟ ಒದಗಿಸುವ ಯೋಜನೆಯನ್ನು ಈ ವರ್ಷದ ಜನವರಿಯಲ್ಲಿ ಆರಂಭಿಸಲಾಗಿತ್ತು.

ಕೋವಿಡ್‍ನಿಂದಾಗಿ ಜಾರಿಗೊಳಿಸಿದ ಲಾಕ್‍ಡೌನ್‌ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ರೂ 5ಕ್ಕೆ ಪ್ಲೇಟ್‍ ಊಟ ಒದಗಿಸಲಾಗಿತ್ತು. ವಲಸೆ ಕಾರ್ಮಿಕರು, ಕಡುಬಡವರು ಇದರ ಅನುಕೂಲ ಪಡೆದಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 848 ಶಿವಭೋಜನ ಕೇಂದ್ರಗಳಿವೆ. ತಾಲ್ಲೂಕು ಮಟ್ಟದಲ್ಲಿಯೂ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು. ಇದುವರೆಗೂ ಯೋಜನೆಯಡಿ ಒಟ್ಟು 1,00,00,870 ಫ್ಲೇಟ್‍ ಊಟವನ್ನು ಪೂರೈಸಲಾಗಿದೆ. ಅಗತ್ಯವುಳ್ಳವರಿಗೆ ಈ ಯೋಜನೆ ವರದಾನವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.