ಭದ್ರತಾ ಪಡೆ
ಸಂಗ್ರಹ ಚಿತ್ರ
ಚಂಡಿಘಡ: ಜಮ್ಮು–ಕಾಶ್ಮೀರದ ಪೂಂಚ್ ವಲಯದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯಿಂದ ಮೃತಪಟ್ಟವರಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 5–ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಕೂಡ ಒಬ್ಬರು. ಹರಿಯಾಣ ಮೂಲದ ದಿನೇಶ್ ಅವರಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಅವರೂ ಸೇನೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.
‘ನನ್ನ ಮಗ ಮಾತೃಭೂಮಿಗಾಗಿ ಸೇವೆ ಸಲ್ಲಿಸುವಾಗ ಪ್ರಾಣತ್ಯಾಗ ಮಾಡಿದ್ದಾನೆ’ ಎಂದು ದಿನೇಶ್ ತಂದೆ ದಯಾಚಂದ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಲ್ವಲ್ ಗ್ರಾಮದ 32 ವರ್ಷದ ಹುತಾತ್ಮ ದಿನೇಶ್ 2014ರಲ್ಲಿ ಸೇನೆಗೆ ಸೇರಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಬುಧವಾರ ಪಾಕಿಸ್ತಾನದ ಸೇನೆಯು ಜಮ್ಮು–ಕಾಶ್ಮೀರದ ಗಡಿ ಅಂಚಿನ ಗ್ರಾಮಗಳನ್ನು ಗುರಿಯಾಗಿಸಿ ಶೆಲ್ ದಾಳಿ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.