ADVERTISEMENT

ಷರೀಫ್‌ ವಿರುದ್ಧ ತೀರ್ಪು ನೀಡುವಂತೆ ನ್ಯಾಯಾಧೀಶರ ಬ್ಲ್ಯಾಕ್‌ಮೇಲ್‌: ಮರಿಯಂ

ಪಿಟಿಐ
Published 7 ಜುಲೈ 2019, 20:00 IST
Last Updated 7 ಜುಲೈ 2019, 20:00 IST
ಮರಿಯಂ ನವಾಜ್‌
ಮರಿಯಂ ನವಾಜ್‌   

ಲಾಹೋರ್‌: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ವಿರುದ್ಧ ತೀರ್ಪು ನೀಡಿ ಜೈಲಿಗೆ ಕಳುಹಿಸುವಂತೆ ತಮಗೆ ಬ್ಲ್ಯಾಕ್‌ಮೇಲ್‌ ಮಾಡಿ, ಒತ್ತಡ ಹೇರಲಾಗಿತ್ತು ಎಂದು ಭ್ರಷ್ಟಾಚಾರ ತಡೆ ನ್ಯಾಯಾಲಯದ ನ್ಯಾಯಾಧೀಶರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾದ ವಿಡಿಯೊ ತುಣುಕನ್ನು ಪಾಕಿಸ್ತಾನ ಮುಸ್ಲಿಂ ಲೀಗ್‌– ನವಾಜ್‌ (ಪಿಎಂಎಲ್‌ಎನ್‌) ನಾಯಕಿ ಮರಿಯಂ ನವಾಜ್‌ ಬಿಡುಗಡೆ ಮಾಡಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಡಿಯೊ ತುಣುಕು ಬಿಡುಗಡೆ ಮಾಡಿದ ಷರೀಫ್‌ ಅವರ ಪುತ್ರಿ ಮರಿಯಂ, ತಮ್ಮ ತಂದೆಯ ವಿರುದ್ಧ ನಡೆದ ನ್ಯಾಯಾಂಗ ಪ್ರಕ್ರಿಯೆ ಸಂಪೂರ್ಣವಾಗಿ ರಾಜಿಮಾಡಿಕೊಳ್ಳಲಾಗಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT