ADVERTISEMENT

ಜಮ್ಮುವಿನ ಸಂಬಾದಲ್ಲಿ ಪಾಕಿಸ್ತಾನ್‌ ತೆಹ್ರೀಕ್–ಎ–ಇನ್ಸಾಫ್‌ ಪಕ್ಷದ ಧ್ವಜ ಪತ್ತೆ

ಪಿಟಿಐ
Published 15 ಆಗಸ್ಟ್ 2023, 4:09 IST
Last Updated 15 ಆಗಸ್ಟ್ 2023, 4:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಇರುವ ಗದ್ದೆಯೊಂದರಲ್ಲಿ ಪಾಕಿಸ್ತಾನ ರಾಜಕೀಯ ಪಕ್ಷವೊಂದರ ಧ್ವಜ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ನೇತೃತ್ವದ ‘ಪಾಕಿಸ್ತಾನ್‌ ತೆಹ್ರೀಕ್–ಎ–ಇನ್ಸಾಫ್‌’ (ಪಿಟಿಐ) ಪಕ್ಷದ ಧ್ವಜವನ್ನು ಬಲೂನಿಗೆ ಕಟ್ಟಿ ಹಾರಿಬಿಡಲಾಗಿದೆ.

ಚಾಕ್ ನಜರ್‌ ಪ್ರದೇಶದಲ್ಲಿರುವ ಗ್ರಾಮವೊಂದರಲ್ಲಿರುವ ಅಜಯ್‌ ಕುಮಾರ್‌ ಎಂಬವರಿಗೆ ಸೇರಿದ ಗದ್ದೆಯಲ್ಲಿ ಧ್ವಜ ಪತ್ತೆಯಾಗಿದೆ.

ADVERTISEMENT

ಈ ಪ್ರದೇಶವು ರಾಮಗಢಿ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಗೆ ಸಮೀಪದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.