
ನವದೆಹಲಿ: ಭಾರತದ ವಿರುದ್ಧ ಭಯೋತ್ಪಾದನೆಯನ್ನು ನಡೆಸುವುದನ್ನು ದೇಶದ ನೀತಿಯನ್ನಾಗಿ ರೂಪಿಸಲು ಪಾಕಿಸ್ತಾನ ಸೇನೆ ಮತ್ತು ಗುಪ್ತಚರ ಇಲಾಖೆ 1947ರಿಂದಲೇ ಪ್ರಯತ್ನಿಸುತ್ತಿವೆ ಎಂದು ವರದಿಯೊಂದು ತಿಳಿಸಿದೆ.
1947ರಿಂದ 2025ರವರೆಗೆ ಭಾರತದ ಮೇಲೆ ನಡೆದ ಭಯೋತ್ಪಾದಕ ದಾಳಿಗಳ ಕುರಿತ ಸಮಗ್ರ ವರದಿಯನ್ನು, ಕಾರ್ಯತಂತ್ರ ಮತ್ತು ಭದ್ರತಾ ವಿಷಯಗಳ ಕುರಿತು ಅಧ್ಯಯನ ನಡೆಸುವ ಸ್ವತಂತ್ರ ಸಂಸ್ಥೆ ‘ನಾಟ್‌ಸ್ಟ್ರಾಟ್’ ಬಿಡುಗಡೆಗೊಳಿಸಿದೆ.
‘ಭಾರತದ ವಿರುದ್ಧ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಬಗ್ಗೆ ಮತ್ತೆ ಮತ್ತೆ ಹೇಳುವ ಅಗತ್ಯವಿದೆ’ ಎಂದು ವರದಿ ಪ್ರತಿಪಾದಿಸಿದೆ.
‘ಭಾರತದ ವಿರುದ್ಧದ ಭಯೋತ್ಪಾದನೆಯನ್ನು 5 ಹಂತಗಳಾಗಿ ವಿಭಾಗಿಸಬಹುದು. 1947ರಿಂದ 1971ರ ಅವಧಿಯು ಮೂಲಭೂತ ಸಂಘರ್ಷಗಳ ಯುಗವಾಗಿತ್ತು. 1972ರಿಂದ 1989ರ ಅವಧಿಯಲ್ಲಿ ಪರೋಕ್ಷ ಯುದ್ಧ ಹೆಚ್ಚಾಗಿತ್ತು. 1990ರಿಂದ 2000ದ ಅವಧಿಯಲ್ಲಿ ಸಂಘರ್ಷ ಮತ್ತು ನಗರದ ಮೇಲಿನ ದಾಳಿ ಉಲ್ಬಣಗೊಂಡಿತ್ತು ಮತ್ತು 2001ರಿಂದ 2009ರವರೆಗೆ ರಾಷ್ಟ್ರದ ಸ್ವತ್ತುಗಳನ್ನು ಗುರಿಯಾಗಿಸಲಾಯಿತು. 2010ರಿಂದ 2025ರವರೆಗೆ ಭಯೋತ್ಪಾದನೆಯೆ ರೂಪಾಂತರ ಮತ್ತು ಕಠಿಣ ಪ್ರತಿಕ್ರಿಯೆಯನ್ನು ನೋಡಬೇಕಾಯಿತು’ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.