ಇಮ್ರಾನ್ ಖಾನ್
– ರಾಯಿಟರ್ಸ್ ಚಿತ್ರ
ಲಾಹೋರ್: ಮೂರು ವರ್ಷಗಳ ಅವಧಿಗೆ ಪಲಾಯನ ಮೂಲಕ ದೇಶ ತೊರೆಯುವ ಆಯ್ಕೆಯನ್ನು ನೀಡಲಾಗಿತ್ತು. ಆದರೆ ನಾನು ಅದನ್ನು ನಿರಾಕರಿಸಿದ್ದೆ ಎಂದು ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
‘ಅಟಾಕ್ ಜೈಲಿನಲ್ಲಿರುವಾಗ ಮೂರು ವರ್ಷ ದೇಶದಿಂದ ಪಲಾಯನ ಮಾಡುವ ಅವಕಾಶ ನೀಡಲಾಗಿತ್ತು. ಆದರೆ ನಾನು ಪಾಕಿಸ್ತಾನದಲ್ಲೇ ಜೀವಿಸಿ, ಸಾಯುವೆ’ ಎಂದು ಅವರು ಹೇಳಿದ್ದಾರೆ.
ರಾವಲ್ಪಿಂಡಿಯ ಅದಿಯಾಲ ಜೈಲಿನಲ್ಲಿರುವ ಇಮ್ರಾನ್ ಖಾನ್, ಪತ್ರಕರ್ತರೊಂದಿಗೆ ಸಂವಾದ ವೇಳೆ ಈ ವಿಷಯ ಹೇಳಿದ್ದಾರೆ. ಪರೋಕ್ಷವಾಗಿ ನನ್ನನ್ನು ಸಂಪರ್ಕಿಸಲಾಗಿತ್ತು. ಇಸ್ಲಾಮಾಬಾದ್‌ನಲ್ಲಿರುವ ತಮ್ಮ ನಿವಾಸ ಬನಿ ಗಲಿಗೂ ವರ್ಗಾಯಿಸುವ ಆಮಿಷ ಒಡ್ಡಲಾಗಿತ್ತು ಎಂದಿದ್ದಾರೆ.
2023ರ ಆಗಸ್ಟ್‌ನಿಂದಲೂ ಇಮ್ರಾನ್ ಖಾನ್ ಈ ಜೈಲಿನಲ್ಲಿದ್ದಾರೆ.
‘ನನ್ನ ನಿಲುವು ಸ್ಪಷ್ಟ. ಬಂಧನದಲ್ಲಿರುವ ನನ್ನ ನಾಯಕರು ಹಾಗೂ ಕಾರ್ಯಕರ್ತರನ್ನು ಮೊದಲು ಬಿಡಿ. ನಂತರ ನನ್ನ ವಿಷಯ ಚರ್ಚೆ ಮಾಡೋಣ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.