ADVERTISEMENT

ಪಳನಿಸ್ವಾಮಿ ಎಐಎಡಿಎಂಕೆ ಪರಮೋಚ್ಛ ನಾಯಕ: ಮದ್ರಾಸ್ ಹೈಕೋರ್ಟ್ ತೀರ್ಪು

ಪಿಟಿಐ
Published 2 ಸೆಪ್ಟೆಂಬರ್ 2022, 12:48 IST
Last Updated 2 ಸೆಪ್ಟೆಂಬರ್ 2022, 12:48 IST
ಕೆ. ಪಳನಿಸ್ವಾಮಿ
ಕೆ. ಪಳನಿಸ್ವಾಮಿ   

ಚೆನ್ನೈ:ಎಐಎಡಿಎಂಕೆಯ ಪರಮೋಚ್ಛ ಮತ್ತು ಶಾಸಕಾಂಗ ಪಕ್ಷದನಾಯಕರಾಗಿ ಕೆ.ಪಳನಿಸ್ವಾಮಿ ಅವರ ಆಯ್ಕೆಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ಸಿಂಧುಗೊಳಿಸಿದೆ.

ಪಕ್ಷದನಾಯಕತ್ವದ ವಿಚಾರದಲ್ಲಿ ಉದ್ಭವಿಸಿದ್ದ ವಿವಾದದಲ್ಲಿ ಪಕ್ಷದ ನಾಯಕ ಕೆ. ಪಳನಿಸ್ವಾಮಿ ಅವರ ಏಕ ನಾಯಕತ್ವ ಬೇಡಿಕೆಯ ಮನವಿಯನ್ನು ನ್ಯಾಯಮೂರ್ತಿ ಎಂ. ದುರೈಸ್ವಾಮಿ ಮತ್ತು ಸುಂದರ್‌ ಮೋಹನ್‌ ಅವರಿದ್ದ ವಿಭಾಗೀಯ ಪೀಠವು ಪುರಸ್ಕರಿಸಿದೆ.

ಪನ್ನೀರ್‌ ಸೆಲ್ವಂ ಅವರು ಪಕ್ಷದ ಸಂಚಾಲಕರಾಗಿ ಮತ್ತು ಪಳನಿಸ್ವಾಮಿ ಅವರು ಜಂಟಿ ಸಂಚಾಲಕರಾಗಿ ದ್ವಿನಾಯಕತ್ವದ ಯಥಾಸ್ಥಿತಿ ಕಾಯ್ದುಕೊಳ್ಳಲು, ನ್ಯಾಯಮೂರ್ತಿ ಜಿ. ಜಯಚಂದ್ರನ್ ಅವರಿದ್ದ ಏಕ ಸದಸ್ಯ ಪೀಠವು ಆಗಸ್ಟ್ 17ರಂದು ನೀಡಿದ್ದ ಆದೇಶವನ್ನುವಿಭಾಗೀಯ ಪೀಠ ವಜಾಗೊಳಿಸಿದೆ.

ADVERTISEMENT

ಜುಲೈ 11ರಂದು ನಡೆದ ಪಕ್ಷದ ಸಾಮಾನ್ಯಮಂಡಳಿ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಕೆ. ಪಳನಿಸ್ವಾಮಿ ಅವರನ್ನು ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಉನ್ನತ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಸಾಮಾನ್ಯ ಮಂಡಳಿ ಸಭೆಯಲ್ಲಿ ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.