ADVERTISEMENT

ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ: ಸಚಿವ ಸಿಂಧಿಯಾ

ಪಿಟಿಐ
Published 12 ಜನವರಿ 2025, 4:33 IST
Last Updated 12 ಜನವರಿ 2025, 4:33 IST
ಜ್ಯೋತಿರಾದಿತ್ಯ ಸಿಂಧಿಯಾ
ಜ್ಯೋತಿರಾದಿತ್ಯ ಸಿಂಧಿಯಾ   

ಗುನಾ: ದೇಶದ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿಯೂ ಪಾಸ್‌ಪೋರ್ಟ್‌ ಸೇವಾ ಕೇಂದ್ರ ತೆರೆಯಲಾಗುವುದು ಎಂದು ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದ್ದಾರೆ.

ಸಂಸತ್ತಿನಲ್ಲಿ ತಾವು ಪ್ರತಿನಿಧಿಸುವ ಮಧ್ಯಪ್ರದೇಶದ ಗುನಾದಲ್ಲಿ ನೂತನ ಕೇಂದ್ರಕ್ಕೆ ಚಾಲನೆ ನೀಡಿದ ವೇಳೆ ಈ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಅವರು, ರಾಜ್ಯದಲ್ಲಿ ಇನ್ನೂ ಆರು ಹೊಸ ಪಾಸ್‌ಪೋರ್ಟ್‌ ಕೇಂದ್ರಗಳು 2025ರಲ್ಲೇ ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.

'ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಸಂಸತ್ತಿನ ಪ್ರತಿಯೊಂದು ಕ್ಷೇತ್ರದಲ್ಲೂ ಸೇವಾ ಕೇಂದ್ರ ತೆರೆಯಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ವಿದೇಶಾಂಗ ಸಚಿವಾಲಯದ ಸಹಯೋಗದಲ್ಲಿ, ಅಂಚೆ ಇಲಾಖೆಯು ಈ ಕಾರ್ಯವನ್ನು ಸಾಕಾರಗೊಳಿಸಲು ಬದ್ಧವಾಗಿದೆ' ಎಂದಿದ್ದಾರೆ.

ADVERTISEMENT

ಗುನಾದ ಜನರು ಪಾಸ್‌ಪೋರ್ಟ್‌ಗಳನ್ನು ಮಾಡಿಸಲು ಭೋಪಾಲ್‌ ಅಥವಾ ಗ್ವಾಲಿಯರ್‌ಗೆ ಹೋಗಬೇಕಾಗಿತ್ತು. ಆದರೆ, ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭವಾಗಿರುವುದರಿಂದ ಆ ಸಮಸ್ಯೆ ನಿವಾರಣೆಯಾದಂತಾಗಿದೆ ಎಂದು ತಿಳಿಸಿದ್ದಾರೆ.

ದೇಶದಾದ್ಯಂತ 6,000 ಅಂಚೆ ಕಚೇರಿಗಳನ್ನು ತೆರೆಯಲಾಗಿದೆ ಎಂದೂ ಇದೇ ವೇಳೆ ಮಾಹಿತಿ ನೀಡಿದ ಸಿಂಧಿಯಾ, 'ದೇಶದ ಜನರು ಕೈಯಿಂದಲೇ ಪ್ರತಗಳನ್ನು ಬರೆಯುವ ರೂಢಿಯನ್ನು ಮತ್ತೆ ಆರಂಭಸುವಂತೆ ಮಾಡಬೇಕಿದೆ. ಅಂತಹ ಅಭ್ಯಾಸದಿಂದ ಹೃದಯದ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.