ADVERTISEMENT

ಪೆಗಾಸಸ್: ಎನ್‌ಎಸ್‌ಒಗೆ ಮೋದಿ ಸರ್ಕಾರದಿಂದ ₹100 ಕೋಟಿ – ಪ್ರಶಾಂತ್ ಭೂಷಣ್ ಆರೋಪ

ಡೆಕ್ಕನ್ ಹೆರಾಲ್ಡ್
Published 23 ಜುಲೈ 2021, 15:11 IST
Last Updated 23 ಜುಲೈ 2021, 15:11 IST
ಪ್ರಶಾಂತ್ ಭೂಷಣ್ (ಪಿಟಿಐ ಚಿತ್ರ)
ಪ್ರಶಾಂತ್ ಭೂಷಣ್ (ಪಿಟಿಐ ಚಿತ್ರ)   

ನವದೆಹಲಿ: ಪೆಗಾಸಸ್‌ ಕುತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವ ಇಸ್ರೇಲ್ ಕಂಪನಿ ಎನ್‌ಎಸ್‌ಒಗೆ ನರೇಂದ್ರ ಮೋದಿ ಸರ್ಕಾರ ₹100 ಕೋಟಿ ಪಾವತಿಸಿದೆ ಎಂದು ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ಮಂಡಳಿ ಸೆಕ್ರೆಟರಿಯೆಟ್ (ಎನ್‌ಎಸ್‌ಸಿಎಸ್‌) ಬಜೆಟ್‌ನಲ್ಲಿ ಅನುದಾನ ಹೆಚ್ಚಳ ಮಾಡಿರುವುದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು ಕೇಂದ್ರದ ವಿರುದ್ಧ ಆರೋಪ ಮಾಡಿದ್ದಾರೆ.

ಎನ್‌ಎಸ್‌ಒ ಗ್ರೂಪ್ ತಯಾರಿಸಿದ ಪೆಗಾಸಸ್‌ ಕುತಂತ್ರಾಂಶವು ವಿವಿಧ ಸರ್ಕಾರಗಳ ಅಧಿಕೃತ ಗೂಢಚರ್ಯೆ ಸಾಧನವಾಗಿ ಬಳಕೆಯಾಗಿದೆ ಎಂಬ ವರದಿಗಳ ಬೆನ್ನಲ್ಲೇ ಈ ಆರೋಪ ಕೇಳಿಬಂದಿದೆ.

‘2016–17ರಲ್ಲಿ ಎನ್‌ಎಸ್‌ಎ ಬಜೆಟ್ ₹33.17 ಕೋಟಿ ಇತ್ತು. ನಂತರದ ವರ್ಷ ಅದು 10 ಪಟ್ಟು ಹೆಚ್ಚಾಗಿ ₹333 ಕೋಟಿ ಆಗಿತ್ತು. ಹೊಸ ‘ಸೈಬರ್ ಸೆಕ್ಯೂರಿಟಿ ಆರ್‌&ಡಿ’ ಅಡಿ ₹300 ಕೋಟಿ ಹೆಚ್ಚಿಸಲಾಗಿತ್ತು. ಅದೇ ವರ್ಷ ಪ್ರತಿಪಕ್ಷಗಳ, ಪತ್ರಕರ್ತರ, ನ್ಯಾಯಾಧೀಶರ, ಚುನಾವಣಾ ಆಯುಕ್ತರ, ಚಳವಳಿಗಾರರನ್ನು ಗುರಿಯಾಗಿಸಿ ಬೇಹುಗಾರಿಕೆ ನಡೆಸಲು ಎನ್‌ಎಸ್‌ಒಗೆ ₹100 ಕೋಟಿ ಪಾವತಿಸಲಾಗಿತ್ತು’ ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.