ADVERTISEMENT

ಅಕ್ರಮವಾಗಿ ಜಾಹೀರಾತು: ಸಚಿವರಿಗೆ ದಂಡ

ಪಿಟಿಐ
Published 16 ಫೆಬ್ರುವರಿ 2020, 19:45 IST
Last Updated 16 ಫೆಬ್ರುವರಿ 2020, 19:45 IST

ಹೈದರಾಬಾದ್: ಅಕ್ರಮವಾಗಿ ಜಾಹೀರಾತು ಫಲಕ ಹಾಕಿದ್ದಕ್ಕಾಗಿ ಪಶುಸಂಗೋಪನೆ ಸಚಿವ ಟಿ. ಶ್ರೀನಿವಾಸ ಯಾದವ್‌ ಅವರಿಗೆ ಹೈದರಾಬಾದ್‌ ಮಹಾನಗರ ಪಾಲಿಕೆ ₹5 ಸಾವಿರ ದಂಡ ವಿಧಿಸಿದೆ.

ಪಾಲಿಕೆಯ ಕೇಂದ್ರ ಜಾರಿ ಕೋಶದ ಸಾಮಾಜಿಕ ಮಾಧ್ಯಮದ ಪೇಜ್‌ನಲ್ಲಿ ಜಾಹೀರಾತುಫಲಕದ ವಿರುದ್ಧ ದೂರುಗಳು ಬಂದ ಹಿನ್ನಲೆಯಲ್ಲಿ ಪಾಲಿಕೆ ಈ ಕ್ರಮ ಕೈಗೊಂಡಿದೆ. ಶ್ರೀನಿವಾಸ ಅವರು ದಂಡವನ್ನು ಪಾವತಿಸಿದ್ದಾರೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್‌ ಅವರ ಜನ್ಮದಿನದ ಶುಭ ಕೋರಿ ಈ ಫಲಕವನ್ನು ಹಾಕಲಾಗಿತ್ತು ಎನ್ನಲಾಗಿದೆ.

ADVERTISEMENT

ಚಂಡೀಗಡ: ಪಂಜಾಬಿನ ಸಂಗ್ರೂರ್‌ ಜಿಲ್ಲೆಯ ಶಾಲಾ ವಾಹನದಲ್ಲಿ ನಾಲ್ಕು ಮಕ್ಕಳು ಸಜೀವ ದಹನಗೊಂಡ ಪ್ರಕರಣ ಸಂಬಂಧ ಶಾಲೆಯ ಪ್ರಾಶುಂಪಾಲ, ಮಾಲೀಕ ಹಾಗೂ ವಾಹನ ಚಾಲಕನನ್ನು ಬಂಧಿಸಲಾಗಿದೆ.

ಚಮೃತ ಮಕ್ಕಳಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ತಂದೆ, ಸಿಮ್ರನ್‌ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲ ಲಖ್‌ವಿಂದರ್‌ ಸಿಂಗ್‌ ಮತ್ತು ಚಾಲಕ ದಲ್ಬೀರ್‌ ವಿರುದ್ಧ ದೂರು ದಾಖಲಿಸಿದ್ದರು. ಹಾಗಾಗಿ ಅವರಿಬ್ಬರನ್ನು ಕೊಲೆ ಆರೋಪದಡಿ ಬಂಧಿಸಲಾಗಿದೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್‌ ಹಾಗೂ ಸ್ಥಿರ ದೂರವಾಣಿಗಳ 2ಜಿ ಇಂಟರ್‌ನೆಟ್‌ ಸೇವೆಯನ್ನು ಫೆಬ್ರುವರಿ 24ವರೆಗೆ ಮುಂದುವರೆಸಲು ಇಲ್ಲಿನ ಆಡಳಿತ ನಿರ್ಧರಿಸಿದೆ. ಸರ್ಕಾರ ಗುರುತಿಸಿರುವ 1, 485 ವೆಬ್‌ಸೈಟ್‌ಗಳು ಹಾಗೂ ವಿಪಿಎನ್‌ ಅಪ್ಲಿಕೇಷನ್‌ ಮೂಲಕ ಸಾಮಾಜಿಕ ಜಾಲತಾಣಗಳ ಬಳಕೆಗೆ ಅವಕಾಶ ನೀಡುವಂತೆ ಇಂಟರ್‌ನೆಟ್‌ ಸೇವಾ ಕಂಪನಿಗಳಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.