ADVERTISEMENT

ನೂಹ್‌ ಘರ್ಷಣೆಯಲ್ಲಿ ಕಾಂಗ್ರೆಸ್‌ ಕೈವಾಡ ಸಾಧ್ಯತೆ: ಹರಿಯಾಣ ಸಚಿವ

ಪಿಟಿಐ
Published 29 ಆಗಸ್ಟ್ 2023, 16:03 IST
Last Updated 29 ಆಗಸ್ಟ್ 2023, 16:03 IST
ಹರಿಯಾಣದ ನೂಹ್‌ ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ವೇಳೆ ಉದ್ರಿಕ್ತ ಗುಂಪಿನಿಂದ ಬೆಂಕಿಗಾಹುತಿಯಾದ ದ್ವಿಚಕ್ರ ವಾ‌ಹನ
ಹರಿಯಾಣದ ನೂಹ್‌ ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ವೇಳೆ ಉದ್ರಿಕ್ತ ಗುಂಪಿನಿಂದ ಬೆಂಕಿಗಾಹುತಿಯಾದ ದ್ವಿಚಕ್ರ ವಾ‌ಹನ    –ಪಿಟಿಐ ಚಿತ್ರ

ಚಂಡೀಗಢ: ನೂಹ್‌ನಲ್ಲಿ ಕಳೆದ ತಿಂಗಳು ನಡೆದಿದ್ದ ಹಿಂಸಾಚಾರದಲ್ಲಿ ಕಾಂಗ್ರೆಸ್‌ನ ಕೈವಾಡವಿರಬಹುದು ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಮಂಗಳವಾರ ಹೇಳಿದ್ದಾರೆ.

ಜತೆಗೆ, ಪಾಕಿಸ್ತಾನದ ಸಂಚು ಇರಬಹುದಾ ಎಂಬ ಆಯಾಮದಲ್ಲಿ ತನಿಖೆ ನಡೆಸಲು ಪೊಲೀಸರು ಕೇಂದ್ರ ತನಿಖಾ ತಂಡಗಳ ನೆರವು ಪಡೆಯಲಿದ್ದಾರೆ ಎಂದು ಅವರು ವಿಧಾನಸಭೆಯ ಹೊರಗೆ ಹೇಳಿದರು.

ನೂಹ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್‌ಗೆ ಹರಿಯಾಣ ಪೊಲೀಸರು ನೋಟಿಸ್ ನೀಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

ADVERTISEMENT

ಸೈಬರ್ ಪೊಲೀಸ್ ಠಾಣೆಯ ಮೇಲಿನ ದಾಳಿಯಂಥ ಘಟನೆಗಳನ್ನು ಪರಿಶೀಲಿಸಲಾಗುತ್ತಿದೆ. ಪಾಕಿಸ್ತಾನದಿಂದ ಅನೇಕ ವಿಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.

ಘರ್ಷಣೆಗೆ ಸಂಬಂಧಿಸಿದಂತೆ ಈ ವರೆಗೆ 510 ಮಂದಿಯನ್ನು ಬಂಧಿಸಲಾಗಿದ್ದು, 130 ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ವಿಜ್‌ ಹೇಳಿದ್ದಾರೆ.

ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ನ ಮೆರವಣಿಗೆಯ ಮೇಲೆ ಗುಂಪೊಂದು ದಾಳಿ ಮಾಡಿತ್ತು. ನಂತರ ನೂಹ್ ಮತ್ತು ಸುತ್ತಲ ಪ್ರದೇಶಗಳಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದಿದ್ದವು. ಇಬ್ಬರು ಗೃಹರಕ್ಷಕರು ಮತ್ತು ಧರ್ಮಗುರು ಸೇರಿದಂತೆ ಆರು ಜನ ಮೃತಪಟ್ಟಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.