ಮಂಡಿ ಜಿಲ್ಲೆಯ ಗ್ರಾಮವೊಂದರಲ್ಲಿ ಪ್ರವಾಹದಿಂದಾಗಿ ನೆಲಸಮವಾದ ಮನೆ
ಪಿಟಿಐ ಚಿತ್ರ
ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಪ್ರವಾಹದಲ್ಲಿ ಸಿಯಾಥಿ ಗ್ರಾಮದಲ್ಲಿ ಸಾಕು ನಾಯಿಯಿಂದಾಗಿ 60 ಜನರು ಪ್ರಾಣ ಉಳಿಸಿಕೊಂಡಿದ್ದಾರೆ.
ಗ್ರಾಮಸ್ಥರೊಬ್ಬರು ಕರಾಳ ರಾತ್ರಿಯನ್ನು ನೆನೆದು, ‘ಆವತ್ತು ರಾತ್ರಿ ಭಾರಿ ಮಳೆ ಸುರಿಯುತ್ತಿತ್ತು, ಇದ್ದಕ್ಕಿದಂತೆ ಎರಡನೇ ಮಹಡಿಯಲ್ಲಿ ಮಲಗಿದ್ದ ನಾಯಿ ಜೋರಾಗಿ ಕೂಗಲಾರಂಭಿಸಿತು. ಅಷ್ಟರಲ್ಲಿ ನಾಯಿಯ ಮಾಲೀಕ ನರೇಂದರ್ ಎನ್ನುವರು ಎದ್ದು ಹೊರಬಂದಿದ್ದರು. ನಾಯಿ ಕೂಗುತ್ತಿದ್ದ ಕಡೆಗೆ ನೋಡಿದಾಗ ಕಟ್ಟಡದ ಗೋಡೆಗಳಲ್ಲಿ ಬಿರುಕು ಬಿಟ್ಟಿತ್ತು. ತಕ್ಷಣವೇ ನರೇಂದರ್ ಗ್ರಾಮದಲ್ಲಿದ್ದ ಸುತ್ತಮುತ್ತಲಿನ ಜನರನ್ನು ಎಚ್ಚರಿಸಿದರು. ಇದರಿಂದ 60 ಜನರು ಎಲ್ಲವನ್ನೂ ಬಿಟ್ಟು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಓಡಿದರು. ಬಳಿಕ ಸಂಭವಿಸಿದ ಭೂಕುಸಿತ ಗ್ರಾಮವನ್ನು ನರಕವಾಗಿಸಿದೆ. ಸದ್ಯ ಅಲ್ಲಿ ಅವಶೇಷಗಳು ಮಾತ್ರ ಉಳಿದಿದೆ’ ಎಂದಿದ್ದಾರೆ.
ಮಂಡಿ ಜಿಲ್ಲೆಯಲ್ಲಿ ಜೂನ್ 30 ರಿಂದ ಜುಲೈ 1ರ ನಡುವೆ ಸಂಭವಿಸಿದ ಭೀಕರ ಭೂಕುಸಿತ, ಪ್ರವಾಹದಲ್ಲಿ 14 ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. 10 ಕಡೆಗಳಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ನಾಪತ್ತೆಯಾದ 28 ಜನರ ಪತ್ತೆ ಕಾರ್ಯ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.