ADVERTISEMENT

ಕೋವಿಡ್ ಅಂಕಿಅಂಶ ಮುಚ್ಚಿಡಲು ಯತ್ನಿಸಿದ್ದ ಪಿಣರಾಯಿ ವಿಜಯನ್ ಸರ್ಕಾರ: ನಡ್ಡಾ

ಏಜೆನ್ಸೀಸ್
Published 12 ಜುಲೈ 2020, 8:14 IST
Last Updated 12 ಜುಲೈ 2020, 8:14 IST
ಜೆ.ಪಿ. ನಡ್ಡಾ (ಸಂಗ್ರಹ ಚಿತ್ರ)
ಜೆ.ಪಿ. ನಡ್ಡಾ (ಸಂಗ್ರಹ ಚಿತ್ರ)   

ನವದೆಹಲಿ: ಕೇರಳದ ಪಿಣರಾಯಿ ವಿಜಯನ್ ಸರ್ಕಾರವು ಕೋವಿಡ್–19 ಅಂಕಿಅಂಶಗಳನ್ನು ಮುಚ್ಚಿಡಲು ಯತ್ನಿಸಿತ್ತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.

ಕೊರೊನಾ ಬಿಕ್ಕಟ್ಟನ್ನು ಪಿಣರಾಯಿ ಸರ್ಕಾರ ಗೊಂದಲಮಯವಾಗಿಸಿದೆ. ನಾವು ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ವೈದ್ಯರು ಹೇಳುತ್ತಲೇ ಇದ್ದರೂ ರಾಜ್ಯ ಸರ್ಕಾರದ ಧೋರಣೆ ನಕಾರಾತ್ಮಕವಾಗಿತ್ತು ಎಂದು ನಡ್ಡಾ ಹೇಳಿದ್ದಾರೆ.

ಚಿನ್ನ ಕಳ್ಳಸಾಗಣಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಕಚೇರಿ ನಂಟುಹೊಂದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ನಡ್ಡಾ, ‘ಚಿನ್ನದ ಬಣ್ಣ ಎಲ್ಲ ಕಡೆ ಹಳದಿಯಾಗಿದೆ. ಆದರೆ ಕೇರಳದಲ್ಲಿ ಕೆಂಪು ಆಗಿದೆ. ಐಟಿ ಅಧಿಕಾರಿ ಮತ್ತು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ನಡುವಣ ಸಂಬಂಧವೇನು’ ಎಂದು ನಡ್ಡಾ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.