ADVERTISEMENT

ಲಡಾಖ್‌ ಗಡಿಯಲ್ಲಿ ಬಂಧಿಸಿದ್ದ ಚೀನಾ ಯೋಧನ ಹಸ್ತಾಂತರಿಸಿದ ಭಾರತೀಯ ಸೇನೆ

ಏಜೆನ್ಸೀಸ್
Published 21 ಅಕ್ಟೋಬರ್ 2020, 3:16 IST
Last Updated 21 ಅಕ್ಟೋಬರ್ 2020, 3:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಡಾಖ್: ಪೂರ್ವ ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯು ಬಂಧಿಸಿದ್ದ ಪೀಪಲ್ಸ್‌ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಯೋಧ ವಾಂಗ್ ಯಾ ಲಾಂಗ್‌ನನ್ನು ಮಂಗಳವಾರ ರಾತ್ರಿ ಹಸ್ತಾಂತರಿಸಲಾಯಿತು. ಚುಶುಲ್ ಮೊಲ್ಡೊ ಮೀಟಿಂಗ್ ಪಾಯಿಂಟ್‌ ಪ್ರದೇಶದಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆಯಿತು.

ಚೀನಾ ಯೋಧನನ್ನು ಭಾರತೀಯ ಸೇನೆಯು ಸೋಮವಾರ ಬಂಧಿಸಿತ್ತು. ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಆತನನ್ನು ಹಸ್ತಾಂತರಿಸುವುದಾಗಿ ಸೇನೆ ಹೇಳಿತ್ತು.

ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ದಾಟಿದ ಕಾರಣ ಡೆಮ್ಚಾಕ್ ಸೆಕ್ಟರ್‌ನಲ್ಲಿ ವಾಂಗ್ ಯಾ ಲಾಂಗ್‌ನನ್ನು ಬಂಧಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.