ADVERTISEMENT

ಅಸ್ಸಾಂ, ಪಶ್ಚಿಮ ಬಂಗಾಳಕ್ಕೆ ಸೋಮವಾರ ಮೋದಿ ಭೇಟಿ

ಪಿಟಿಐ
Published 20 ಫೆಬ್ರುವರಿ 2021, 14:03 IST
Last Updated 20 ಫೆಬ್ರುವರಿ 2021, 14:03 IST
ಮೋದಿ
ಮೋದಿ   

ನವದೆಹಲಿ: ಸದ್ಯದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಿರುವ ಅಸ್ಸಾಂ ಹಾಗೂ ಪಶ್ಚಿಮಬಂಗಾಳ ರಾಜ್ಯಗಳಿಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಅಸ್ಸಾಂನ ಸಿಲಾಪಥರ್‌ನಲ್ಲಿ ಪ್ರಮುಖ ಯೋಜನೆಯಾದ ತೈಲ ಹಾಗೂ ಗ್ಯಾಸ್‌ ಸೆಕ್ಟರ್‌ನ್ನು ಉದ್ಘಾಟಿಸಲಿದ್ದಾರೆ. ಇಂಡಿಯನ್‌ ಆಯಿಲ್‌ನ ಬೊಂಗೈಗಾಂವ್‌ ರಿಫೈನರಿಯ ಇಂಡ್‌ಮ್ಯಾಕ್ಸ್‌ ಘಟಕವಿದು. ಆಯಿಲ್‌ ಇಂಡಿಯಾ ಲಿಮಿಟೆಡ್‌ನ ಎರಡನೇ ಟ್ಯಾಂಕ್‌ ಫಾರ್ಮ್‌ ಇದು. ಬಳಿಕ ಹೆಬೆದ ಗ್ರಾಮದ ಟಿನ್ಸುಕಿಯ ಎಂಬಲ್ಲಿ ಗ್ಯಾಸ್ ಕಂಪ್ರೆಸರ್‌ ಸ್ಟೇಷನ್‌ ಉದ್ಘಾಟಿಸಲಿದ್ದಾರೆ.

ನಂತರ ಅವರು ಧೆಮಾಜಿ ಎಂಜಿನಿಯರಿಂಗ್‌ ಕಾಲೇಜನ್ನು ಉದ್ಘಾಟನೆ ಮಾಡಲಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಸುಲ್ಕುಂಜಿ ತಾಂತ್ರಿಕ ಕಾಲೇಜಿನ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ADVERTISEMENT

ನಂತರ ಪಶ್ಚಿಮಬಂಗಾಳಕ್ಕೆ ತೆರಳಲಿರುವ ಪ್ರಧಾನಿ, ಅಲ್ಲಿನ ಹೂಗ್ಲಿಯಲ್ಲಿ ಅನೇಕ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.ನೊಪಾರದಿಂದ ದಕ್ಷಿಣೇಶ್ವರ ವಿಸ್ತರಣಾ ಮೆಟ್ರೋ ಮಾರ್ಗದ ಸೇವೆಗೆ ಚಾಲನೆ ನೀಡಲಿದ್ದಾರೆ. 4.1 ಕಿ.ಮೀ ಉದ್ದದ ಈ ಮಾರ್ಗವನ್ನು ₹464 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸಂಪೂರ್ಣ ಕೇಂದ್ರ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.