ADVERTISEMENT

ತಮಿಳುನಾಡಿನಲ್ಲಿ ಬಹುಕೋಟಿ ಮೌಲ್ಯದ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಪಿಟಿಐ
Published 14 ಫೆಬ್ರುವರಿ 2021, 8:27 IST
Last Updated 14 ಫೆಬ್ರುವರಿ 2021, 8:27 IST
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ   

ಚೆನ್ನೈ: ಚೆನ್ನೈ ಮೆಟ್ರೊ ರೈಲು ಹಂತ-1 ವಿಸ್ತರಣೆ ಸೇರಿದಂತೆ ತಮಿಳುನಾಡಿನಲ್ಲಿ ಬಹುಕೋಟಿ ಮೌಲ್ಯದ ಹಲವಾರು ಯೋಜನೆಗಳಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಪ್ರಧಾನಿ ಮೋದಿ ಚಾಲನೆ ನೀಡಿದ ಪ್ರಮುಖ ಯೋಜನೆಗಳು:
*ವಾಶರ್‌ಮನ್‌ಪೇಟ್‌ನಿಂದ ಉತ್ತರ ಚೆನ್ನೈನ ವಿಮ್ಕೊ ನಗರಕ್ಕೆ ಸಂಪರ್ಕಿಸುವ ₹3,770 ಕೋಟಿ ಮೌಲ್ಯದ ಮೆಟ್ರೊ ರೈಲ್ವೆ ಯೋಜನೆ.
*ಚೆನ್ನೈ ಬೀಚ್‌ನಿಂದ ಅಟ್ಟಿಪಟ್ಟು ವರೆಗೆ ನಾಲ್ಕನೇ ರೈಲ್ವೆ ಹಳಿ ಯೋಜನೆ; ₹293.40 ಮೌಲ್ಯ.
*ವಿಲ್ಲುಪುರಂ ಕಡಲೂರು-ಮೈಲಾದುರೈ ತಂಜಾವೂರು-ಮೈಲಾದುರೈ-ತಿರುವಾರೂರ್ ಸಿಂಗಲ್ ಲೈನ್ ರೈಲ್ವೆ ವಿದ್ಯುದ್ದೀಕರಣ.
*ಐಐಟಿ ಮದ್ರಾಸ್‌ನ ಡಿಸ್ಕವರಿ ಕ್ಯಾಂಪಸ್‌ಗೆ ಶಿಲಾನ್ಯಾಸ. ತಾಯಿಯೂರ್‌ನಲ್ಲಿ ಅಂದಾಜು ₹1,000 ಕೋಟಿ ವೆಚ್ಚದಲ್ಲಿ ಇದರ ನಿರ್ಮಾಣ.

ನೆಹರೂ ಸ್ಟೇಡಿಯನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ, ಸಚಿವ ಸಂಪುಟದ ಇತರೆ ಸಚಿವರು, ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಹಿರಿಯಮುಖಂಡ ಎಂ. ತಂಬಿದುರೈ, ಕೆ.ಪಿ. ಮುನುಸಾಮಿ ಮತ್ತು ಮೈತ್ರಿಕೂಟದ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ADVERTISEMENT

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ₹2,640 ಕೋಟಿ ವೆಚ್ಚದ ಗ್ರ್ಯಾಂಡ್ ಅನಿಕಟ್ ಕಾಲುವೆ ವ್ಯವಸ್ಥೆಯ ವಿಸ್ತರಣೆ, ನವೀಕರಣ ಹಾಗೂ ಆಧುನೀಕರಣಕ್ಕೆ ಅಡಿಪಾಯ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.