ADVERTISEMENT

'ಬೋಡೊ ಅಕಾರ್ಡ್' ಪಾಲನೆಗೆ ಬದ್ಧ: ಅಮಿತ್ ಶಾ

ಪಿಟಿಐ
Published 24 ಜನವರಿ 2021, 11:21 IST
Last Updated 24 ಜನವರಿ 2021, 11:21 IST
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ   

ಅಸ್ಸಾಂ: ಪ್ರತ್ಯೇಕ ಬೋಡೊಲ್ಯಾಂಡ್ ಹೋರಾಟಕ್ಕೆ ವಿರಾಮ ಹಾಕಲು ಕಳೆದ ವರ್ಷ ಜಾರಿಗೆ ತರಲಾದ ಬೋಡೊಲ್ಯಾಂಡ್ ಭೌಗೋಳಿಕ ಸಮಿತಿ (ಬಿಟಿಸಿ) ಒಪ್ಪಂದಪಾಲನೆಗೆ ಬದ್ಧವಾಗಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿರುವ ಅಮಿತ್ ಶಾ, ಹಳೆಯ ಪಕ್ಷವು ಈ ಹಿಂದೆ ವಿವಿಧ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರೂ ಭರವಸೆ ಈಡೇರಿಸಲು ವಿಫಲವಾಗಿದೆ ಎಂದು ಹೇಳಿದರು.

ಈ ಪ್ರದೇಶದಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ದಾರಿ ಮಾಡಿಕೊಡುವ 'ಬಿಟಿಆರ್ ಅಕಾರ್ಡ್'ನ ಎಲ್ಲ ಷರತ್ತುಗಳನ್ನು ಉಳಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂಬುದನ್ನು ಪುನರುಚ್ಛರಿಸಲು ನಾನಿಲ್ಲಿಗೆ ಬಂದಿದ್ದೇನೆ. ಇದು ಈ ಪ್ರದೇಶದಲ್ಲಿ ಬಂಡಾಯದ ಅಂತ್ಯವನ್ನು ಸೂಚಿಸುತ್ತದೆ ಎಂದು ಹೇಳಿದರು.

ADVERTISEMENT

ಬಿಟಿಆರ್ ಅಕಾರ್ಡ್ ದಿನಾಚರಣೆಯ ಅಂಗವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರದ ಅಡಿಯಲ್ಲಿ ಅಸ್ಸಾಂನ ಎಲ್ಲ ಸಮುದಾಯಗಳ ರಾಜಕೀಯ ಹಕ್ಕುಗಳು, ಸಂಸ್ಕೃತಿ ಮತ್ತು ಭಾಷೆ ಸುರಕ್ಷಿತವಾಗಿದೆ ಎಂದು ಹೇಳಿದರು.

ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸ್ಥಳೀಯರಿಗೆ ಭೂಮಿಯ ಪ್ರಮಾಣಪತ್ರ ವಿತರಿಸಿದ್ದರು. ರಾಜ್ಯ ಸರ್ಕಾರವು ಈಗಾಗಲೇ ಬೋಡೊವನ್ನು ಅಸ್ಸಾಂ ಸಹಾಯಕ ಭಾಷೆಯನ್ನಾಗಿ ಗುರುತಿಸಿದೆ.

ಅಸ್ಸಾಂನ ಎಲ್ಲ ಸಮುದಾಯಗಳ ಸಂಸ್ಕೃತಿ, ಭಾಷೆ, ಪರಂಪರೆಯನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರದಿಂದ ಮಾತ್ರ ಭ್ರಷ್ಟಾಚಾರ ಮುಕ್ತ, ಭಯೋತ್ಪಾದನೆ ಮುಕ್ತ ಮತ್ತು ಮಾಲಿನ್ಯ ಮುಕ್ತ ರಾಜ್ಯವನ್ನಾಗಿಸಲು ಸಾಧ್ಯ ಎಂದು ಹೇಳಿದರು.

ಬೋಡೊ ಪ್ರಾದೇಶಿಕ ಜಿಲ್ಲೆ (ಬಿಟಿಎಡಿ) ಪ್ರದೇಶಗಳಲ್ಲಿ ಶಾಂತಿಯನ್ನು ನೆಲೆಸಲು ಕಳೆದ ವರ್ಷ ಜನವರಿ 27ರಂದು ಪ್ರತ್ಯೇಕ ರಾಜ್ಯಕ್ಕಾಗಿ ಹಲವು ದಶಕಗಳಿಂದ ಬೋಡೊ ಜನರು ನಡೆಸುತ್ತಿದ್ದ ಹೋರಾಟಕ್ಕೆ ಬೋಡೊ ಅಕಾರ್ಡ್ ಮೂಲಕ ತಾರ್ಕಿಕ ಅಂತ್ಯ ಹಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.