ADVERTISEMENT

Make in India ವೈಫಲ್ಯ ಎಂಬುದನ್ನು ಪ್ರಧಾನಿ ಒಪ್ಪಿಕೊಳ್ಳಬೇಕು: ರಾಹುಲ್ ಗಾಂಧಿ

ಪಿಟಿಐ
Published 5 ಫೆಬ್ರುವರಿ 2025, 12:50 IST
Last Updated 5 ಫೆಬ್ರುವರಿ 2025, 12:50 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ನವದೆಹಲಿ: 'ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದಲ್ಲಿ 'ಮೇಕ್ ಇನ್ ಇಂಡಿಯಾ' ಪ್ರಸ್ತಾಪಿಸಲೇ ಇಲ್ಲ. ಮೇಕ್ ಇನ್ ಇಂಡಿಯಾ ಉತ್ತಮ ಉಪಕ್ರಮವೆನಿಸಿದರೂ ಅದು ಸಂಪೂರ್ಣ ವೈಫಲ್ಯ ಕಂಡಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಳ್ಳಬೇಕು' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಬರೆದುಕೊಂಡಿರುವ ರಾಹುಲ್, 'ಉತ್ಪಾದನಾ ವಲಯವು 2014ರ ಜಿಡಿಪಿಯ ಶೇ 15.3ರಿಂದ ಶೇ 12.6ಕ್ಕೆ ಇಳಿದಿದ್ದು, ಕಳೆದ 60 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ತಲುಪಿದೆ' ಎಂದು ಹೇಳಿದ್ದಾರೆ.

'ದೇಶದ ಯುವಜನತೆಗೆ ಉದ್ಯೋಗದ ಅಗತ್ಯವಿದೆ. ಈ ರಾಷ್ಟ್ರೀಯ ಸವಾಲನ್ನು ಎದುರಿಸಲು ಯುಪಿಎ ಅಥವಾ ಎನ್‌ಡಿಎ ಯಶಸ್ವಿಯಾಗಿಲ್ಲ. ಜಾಗತಿಕ ಸ್ಪರ್ಧಾತ್ಮಕ ಆರ್ಥಿಕತೆಯಲ್ಲಿ ಉತ್ಪಾದನಾ ವಲಯವನ್ನು ಮತ್ತೆ ಹಾದಿಗೆ ಮರಳಿಸಲು ಸ್ಪಷ್ಟ ಯೋಜನೆ ಬೇಕು' ಎಂದು ಹೇಳಿದ್ದಾರೆ.

'ಉತ್ಪಾದನಾ ದೂರದೃಷ್ಟಿಯ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಮೋಟರ್ಸ್, ಬ್ಯಾಟರಿ, ಆಪ್ಟಿಕ್ಸ್, ಎಐನಂತಹ ತಂತ್ರಜ್ಞಾನಗಳತ್ತ ಹೆಚ್ಚಿನ ಗಮನ ಕೇಂದ್ರಿಕರಿಸಬೇಕಿದೆ. ನಮ್ಮ ಉತ್ಪಾದನಾ ವಲಯವನ್ನು ಪುನರುಜ್ಜೀವನಗೊಳಿಸಲು, ಅತ್ಯಾಧುನಿಕ ಉತ್ಪಾದನಾ ಸಾಮರ್ಥ್ಯ ಅಭಿವೃದ್ಧಿಪಡಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಇದುವೇ ಏಕೈಕ ಮಾರ್ಗವಾಗಿದೆ' ಎಂದು ಹೇಳಿದ್ದಾರೆ.

'ಸದೃಢವಾದ ಕೈಗಾರಿಕಾ ವ್ಯವಸ್ಥೆಯನ್ನು ಹೊಂದಿರುವ ಚೀನಾ, ನಮಗಿಂತ 10 ವರ್ಷಗಳಷ್ಟು ಮುಂದಿದೆ. ಇದುವೇ ನಮಗೆ ಸವಾಲು ಹಾಕಲು ಅವರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಅವರಿಗೆ ಸ್ಪರ್ಧೆ ಒಡ್ಡಲು ನಮ್ಮ ಉತ್ಪಾದನಾ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ. ಅದಕ್ಕಾಗಿ ಸ್ಪಷ್ಟ ದೂರದೃಷ್ಟಿ ಮತ್ತು ತಂತ್ರಗಾರಿಕೆಯ ಅಗತ್ಯವಿದೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.