ADVERTISEMENT

‘ಎರಡು ಗಜ ಅಂತರವಿರಲಿ‘; ಇದುವೇ ನನ್ನ ಹುಟ್ಟಿದ ದಿನಕ್ಕೆ ನಿಮ್ಮ ಉಡುಗೊರೆ: ಮೋದಿ

ಏಜೆನ್ಸೀಸ್
Published 18 ಸೆಪ್ಟೆಂಬರ್ 2020, 2:14 IST
Last Updated 18 ಸೆಪ್ಟೆಂಬರ್ 2020, 2:14 IST
ಅಹಮದಾಬಾದ್‌ನಲ್ಲಿ ಹೂವಿನ ದಳಗಳಿಂದ ಮಹಿಳೆಯರು ರಚಿಸಿದ ರಂಗೋಲಿಯಲ್ಲಿ ಪ್ರಧಾನಿ ಮೋದಿ ಮುಖ ಭಾವ
ಅಹಮದಾಬಾದ್‌ನಲ್ಲಿ ಹೂವಿನ ದಳಗಳಿಂದ ಮಹಿಳೆಯರು ರಚಿಸಿದ ರಂಗೋಲಿಯಲ್ಲಿ ಪ್ರಧಾನಿ ಮೋದಿ ಮುಖ ಭಾವ   

ನವದೆಹಲಿ: 70 ವಸಂತಗಳನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ, ಜನರಿಂದ ಹುಟ್ಟುಹಬ್ಬದ ಉಡುಗೊರೆಯಾಗಿ ಮಾಸ್ಕ್‌ ಧರಿಸುವುದು ಹಾಗೂ ಅಂತರಕಾಯ್ದುಕೊಳ್ಳುವಂತೆ ಕೇಳಿದ್ದಾರೆ.

ಗುರುವಾರ ತಡ ರಾತ್ರಿ ಎಲ್ಲರಿಗೂ ಧನ್ಯವಾದ ಅರ್ಪಿಸಿ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, 'ಜನ್ಮದಿನದ ಉಡುಗೊರೆಯಾಗಿ ನನಗೆ ಏನು ಬೇಕೆಂದು ಬಹಳಷ್ಟು ಜನರು ನನ್ನನ್ನು ಕೇಳಿರುವುದರಿಂದ, ನನಗೇನು ಬೇಕು ಎಂಬುದನ್ನು ಇಲ್ಲಿ ಕೇಳುತ್ತಿದ್ದೇನೆ: ಸದಾ ಮಾಸ್ಕ್‌ ಧರಿಸಿರಿ ಹಾಗೂ ಸರಿಯಾದ ರೀತಿಯಲ್ಲಿ ಧರಿಸಿ; ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸಿ. ದೋ ಗಜ್‌ ಕಿ ದೂರಿ (2 ಗಜಗಳ ಅಂತರ) ನೆನಪಿಟ್ಟುಕೊಳ್ಳಿ; ಜನಸಂದಣೆಯ ಜಾಗಗಳಿಂದ ದೂರವಿರಿ; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ನಮ್ಮ ಜಗತ್ತನ್ನು ಆರೋಗ್ಯ ಪೂರ್ಣಗೊಳಿಸೋಣ' ಎಂದಿದ್ದಾರೆ.

'ಭಾರತದ ಎಲ್ಲ ಕಡೆಯಿಂದ, ಜಗತ್ತಿನ ಎಲ್ಲ ಭಾಗಗಳಿಂದ ಶುಭಾಶಯಗಳನ್ನು ಕೋರಿದ್ದಾರೆ. ನನಗೆ ಶುಭ ಕೋರಿದ ಪ್ರತಿಯೊಬ್ಬರಿಗೂ ಆಭಾರಿಯಾಗಿರುವೆ. ಹರಿದು ಬಂದಿರುವ ಶುಭ ಹಾರೈಕೆಗಳು ಜನರ ಬದುಕನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಲು ಬಲ ನೀಡಿವೆ' ಎಂದು ಹೇಳಿದ್ದಾರೆ.

ADVERTISEMENT

ಬಿಜೆಪಿ ಕಾರ್ಯಕರ್ತರು ಮೋದಿ ಅವರ ಜನ್ಮದಿನದಂದು (ಸೆಪ್ಟೆಂಬರ್ 17) ಸೇವಾ ಕಾರ್ಯಗಳನ್ನು ಆಯೋಜಿಸಿದ್ದರೆ, ವಿರೋಧ ಪಕ್ಷಗಳ ಯುವ ಕಾರ್ಯಕರ್ತರು ಹಾಗೂ ಇತರೆ ಯುವಜನರು ದೇಶದಾದ್ಯಂತ ‘ರಾಷ್ಟ್ರೀಯ ನಿರುದ್ಯೋಗ ದಿನ’ವನ್ನಾಗಿ ಆಚರಿಸಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ದೇಶದಲ್ಲಿ 10,09,976 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ. 40,25,080 ಮಂದಿ ಗುಣಮುಖರಾಗಿದ್ದು, 83,198 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.