ADVERTISEMENT

ಮೀರತ್‌: ಮಂಗಲ್‌ ಪಾಂಡೆ ಪುತ್ಥಳಿಗೆ ಪ್ರಧಾನಿ ಮೋದಿ ಪುಷ್ಪ ನಮನ

ಪಿಟಿಐ
Published 2 ಜನವರಿ 2022, 10:17 IST
Last Updated 2 ಜನವರಿ 2022, 10:17 IST
ಮೀರತ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಮೀರತ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ   

ಮೀರತ್‌(ಉತ್ತರ ಪ್ರದೇಶ): 1857ರ ಸಿಪಾಯಿ ದಂಗೆಯ ಮುಂದಾಳು ಹೋರಾಟಗಾರ ಮಂಗಲ್‌ ಪಾಂಡೆ ಅವರ ಪುತ್ಥಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪುಷ್ಪ ನಮನ ಸಲ್ಲಿಸಿದರು.

ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯ 34ನೇ ಬಂಗಾಳ ಸ್ಥಳೀಯ ಪದಾತಿದಳದಲ್ಲಿ ಮಂಗಲ್‌ ಪಾಂಡೆ ಸಿಪಾಯಿ ಆಗಿದ್ದರು. 1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಿಪಾಯಿ ದಂಗೆಯಲ್ಲಿ ಪಾಂಡೆ ಮುನ್ನೆಲೆಗೆ ಬಂದರು. ಆ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಪರಿಗಣಿಸಲಾಗಿದೆ.

ಪಾಂಡೆ ಅವರ ಪುತ್ಥಳಿಗೆ ನಮನ ಸಲ್ಲಿಸುವುದಕ್ಕೂ ಮುನ್ನ ಪ್ರಧಾನಿ ಮೋದಿ, ನಗರದಲ್ಲಿ ಕಾಲಿ ಪಲಟನ್‌ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅನಂತರ 'ಶಾಹೀದ್‌ ಸ್ಮಾರಕ ಅಮರ್‌ ಜವಾನ್‌ ಜ್ಯೋತಿ' ಸ್ಮಾರಕ ಸ್ಥಳದಲ್ಲಿ 1857ರ ಹೋರಾಟದ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.

ADVERTISEMENT

ರಾಜಕೀಯ ಸ್ವತಂತ್ರ ಸಂಗ್ರಾಮ ಸಂಗ್ರಹಾಲಯಕ್ಕೂ ಭೇಟಿ ನೀಡಿ ಅಲ್ಲಿನ ಪ್ರದರ್ಶನ ವೀಕ್ಷಿಸಿದರು. ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್‌ ಪಟೇಲ್‌ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.