ADVERTISEMENT

92ನೇ ವಸಂತಕ್ಕೆ ಕಾಲಿಟ್ಟ ಲತಾ ಮಂಗೇಶ್ಕರ್: ಪ್ರಧಾನಿ ಮೋದಿ ಶುಭಾಶಯ

ಪಿಟಿಐ
Published 28 ಸೆಪ್ಟೆಂಬರ್ 2021, 6:12 IST
Last Updated 28 ಸೆಪ್ಟೆಂಬರ್ 2021, 6:12 IST
ಲತಾ ಮಂಗೇಶ್ಕರ್
ಲತಾ ಮಂಗೇಶ್ಕರ್   

ನವದೆಹಲಿ: ಭಾರತೀಯ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಮಂಗಳವಾರ 92ನೇ ಜನ್ಮದಿನದ ಸಂಭ್ರಮ.

ಈ ಸಂದರ್ಭದಲ್ಲಿ ಪ್ರಧಾನಿನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ತಮ್ಮದೇ ಗಾಯನ ಶೈಲಿಯಿಂದ ಹಲವು ಪೀಳಿಗೆಯ ನವಗಾಯಕ, ಗಾಯಕರಿಗೆಲತಾ ಮಂಗೇಶ್ಕರ್ ಅವರು ಪ್ರೇರೇಪಣೆಯಾಗಿದ್ದಾರೆ.

‘ಲತಾ ದೀದಿ ಅವರಿಗೆ ಜನ್ಮದಿನದ ಶುಭಾಶಯ. ಸುಶ್ರಾವ್ಯವಾದ ಅವರ ಧ್ವನಿ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಮಾನವೀಯತೆ ಕುರಿತು ಅವರಿಗಿರುವ ಒಲವಿನಿಂದ ಹೆಸರಾಗಿದ್ದಾರೆ. ವ್ಯಕ್ತಿಗತವಾಗಿ ಹಾರೈಕೆಯೇ ದೊಡ್ಡ ಬಲ ನೀಡಲಿದೆ. ಸುದೀರ್ಘ ಮತ್ತು ಆರೋಗ್ಯಕರ ಜೀವನ ಅವರದ್ದಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.