ADVERTISEMENT

ಆಂಧ್ರ ಪ್ರದೇಶ: ಲೇಪಾಕ್ಷಿ ವೀರಭದ್ರ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2024, 10:00 IST
Last Updated 16 ಜನವರಿ 2024, 10:00 IST
<div class="paragraphs"><p>ಲೇಪಾಕ್ಷಿ ವೀರಭದ್ರ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ</p></div>

ಲೇಪಾಕ್ಷಿ ವೀರಭದ್ರ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

   

ಎಕ್ಸ್‌ ಚಿತ್ರ

ನವದೆಹಲಿ: ಆಂಧ್ರ ಪ್ರದೇಶದ ಲೇಪಾಕ್ಷಿಯ ವೀರಭದ್ರ ದೇವಾಲಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದಾರೆ.

ADVERTISEMENT

ದೇವಾಲಯದಲ್ಲಿ ಆರತಿ ಬೆಳಗಿ, ಪ್ರಾರ್ಥನೆ ಸಲ್ಲಿಸಿದ ಬಳಿಕ ಅಲ್ಲಿಯೇ ಕುಳಿತು ರಾಮ ಭಜನೆಯನ್ನು ಹಾಡಿದ್ದಾರೆ.

ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೂ ಮುನ್ನ ಮೋದಿ ಈ ಪ್ರವಾಸ ಕೈಗೊಂಡಿದ್ದಾರೆ. ಆಂಧ್ರಪ್ರದೇಶ ಮತ್ತು ಕೇರಳ ಪ್ರವಾಸದಲ್ಲಿರುವ ಮೋದಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬುಧವಾರ ಕೇರಳದ ಗುರುವಾಯೂರು ಮತ್ತು ತ್ರಿಪ್ರಯಾರದ ಶ್ರೀ ರಾಮಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ತಿಳಿಸಿದೆ.

ಲೇಪಾಕ್ಷಿಗೂ ರಾಮಾಯಣಕ್ಕೂ ನಂಟಿದೆ. ರಾವಣನಿಂದ ಅಪಹರಿಸಲ್ಪಟ್ಟ ಸೀತಾ ದೇವಿಯನ್ನು ಪತ್ತೆ ಮಾಡಲು ಜಟಾಯು ಹೊರಟಾಗ ರಾವಣ ಬಾಣದ ಏಟಿಗೆ ಸಿಲುಕಿ ಗಾಯಗೊಳ್ಳುತ್ತದೆ. ಅಂಥಹ ಸಂದರ್ಭದಲ್ಲಿಯೂ ರಾಮನಿಗೆ ಸೀತೆಯ ಅಪಹರಣದ ಬಗ್ಗೆ ಮಾಹಿತಿ ನೀಡಿ ನಂತರ ರಾಮನಿಂದ ಮೋಕ್ಷ ಪಡೆದ ಜಾಗ ಲೇಪಾಕ್ಷಿ ಎನ್ನುವ ನಂಬಿಕೆಯಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.