ADVERTISEMENT

‘ಸೇವಾ ತೀರ್ಥ’ಕ್ಕೆ ಪ್ರಧಾನಿ ಕಚೇರಿ ಸ್ಥಳಾಂತರ: ಸಚಿವ ಸಂಪುಟದಲ್ಲಿ ಶ್ಲಾಘನೆ

ಪಿಟಿಐ
Published 14 ಫೆಬ್ರುವರಿ 2026, 9:49 IST
Last Updated 14 ಫೆಬ್ರುವರಿ 2026, 9:49 IST
<div class="paragraphs"><p>'ಸೇವಾ ತೀರ್ಥ' ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಉದ್ಘಾಟಿಸಿದರು. </p><p></p></div>

'ಸೇವಾ ತೀರ್ಥ' ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಉದ್ಘಾಟಿಸಿದರು.

   

ನವದೆಹಲಿ: ಪ್ರಧಾನಿ ಕಾರ್ಯಾಲಯವನ್ನು ರೈಸಿನಾ ಹಿಲ್‌ನ ಸೌತ್‌ ಬ್ಲಾಕ್‌ನಿಂದ ಹೊಸದಾಗಿ ನಿರ್ಮಿಸಲಾದ ಸೇವಾ ತೀರ್ಥಕ್ಕೆ ಸ್ಥಳಾಂತರಿಸಿದ್ದನ್ನು ಶ್ಲಾಘಿಸಿ ಕೇಂದ್ರ ಸಚಿವ ಸಂಪುಟ ನಿರ್ಣಯ ಮಾಡಿದೆ. ಇದು ಭೂತ ಹಾಗೂ ಭವಿಷ್ಯದ ಸಂಗಮ ಎಂದು ಬಣ್ಣಿಸಿದೆ.

ADVERTISEMENT

ಶುಕ್ರವಾರ ಸೌತ್ ಬ್ಲಾಕ್‌ನಲ್ಲಿ ‍ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.

‘ಇದು ಕೇವಲ ಸ್ಥಳಾಂತರವಲ್ಲ, ಭೂತ ಹಾಗೂ ಭವಿಷ್ಯದ ಸಂಗಮ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸಚಿವ ಸಂಪುಟದ ನಿರ್ಧಾರಗಳನ್ನು ಮಾಧ್ಯಮಗಳಿಗೆ ವಿವರಿಸುವಾಗ ಹೇಳಿದ್ದಾರೆ.

ಭಾರತದಲ್ಲಿ ತಮ್ಮ ಹಿಡಿತ ಗಟ್ಟಿಮಾಡಿಕೊಳ್ಳಲು ಬ್ರಿಟೀಷರು ಸೌತ್ ಬ್ಲಾಕ್ ಹಾಗೂ ನಾರ್ತ್ ಬ್ಲಾಕ್ ನಿರ್ಮಿಸಿದ್ದರು. ಸ್ವಾತಂತ್ರ್ಯ ಬಳಿಕ ಬಂದ ಸರ್ಕಾರಗಳು ಅದೇ ಕಟ್ಟಡಗಳನ್ನು ಬಳಕೆ ಮಾಡುವುದನ್ನು ಮುಂದುವರಿಸಿದವು ಎಂದು ಅವರು ಹೇಳಿದ್ದಾರೆ.

‘ಹೊಸ ಪ್ರಧಾನಿ ಕಾರ್ಯಾಲಯ ಹಾಗೂ ಕೇಂದ್ರ ಸಚಿವಾಲಯದ ಕಟ್ಟಡಗಳು ವಿಕಸಿತ ಭಾರತದ ಪ್ರಯಾಣದೆಡೆಗೆ ಪ್ರಮುಖ ಮೈಲಿಗಲ್ಲು. ಇದು ನಾಗರಿಕ ಕೇಂದ್ರಿತವಾದ ಆಡಳಿತ ಹಾಗೂ ರಾಷ್ಟ್ರದ ‍ಪ್ರಗತಿಗೆ ಸರ್ಕಾರದ ಬಾಧ್ಯತೆಯ ಪ್ರತೀಕ’ ಎಂದು ಶುಕ್ರವಾರ ಪ್ರಧಾನಿ ಹೇಳಿದ್ದರು.

ಶುಕ್ರವಾರ ‍ಪ್ರಧಾನಿ ಕಚೇರಿ ‘ಸೇವಾ ತೀರ್ಥ’ಕ್ಕೆ ಸ್ಥಳಾಂತರಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.