ಪ್ರಾತಿನಿಧಿಕ ಚಿತ್ರ
ತಿರುವನಂತಪುರ: ಮಲಯಾಳದ ಪ್ರಮುಖ ಸುದ್ದಿವಾಹಿನಿಯೊಂದರ ಸಂಪಾದಕ ಮತ್ತು ಇಬ್ಬರು ವರದಿಗಾರರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ವಾಹಿನಿಯ ಮೂವರು ಪತ್ರಕರ್ತರ ವಿರುದ್ಧ ಬುಧವಾರ ಪೋಕ್ಸೊ ಕಾಯ್ದೆಯ ಸೆಕ್ಷನ್ 11(ಲೈಂಗಿಕ ಕಿರುಕುಳ) ಮತ್ತು 12(ಲೈಂಗಿಕ ಕಿರಕುಳಕ್ಕೆ ಶಿಕ್ಷೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದಾಗಿದೆ ಎಂದು ಕಂಟೋನ್ಮೆಟ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ ಮೊದಲ ವಾರದಲ್ಲಿ ನಡೆದ ‘ರಾಜ್ಯ ಶಾಲಾ ಉತ್ಸವ’ದ ಪ್ರಸಾರದ ವೇಳೆ ವಾಹಿನಿಯ ವರದಿಗಾರರು ಸ್ವರ್ಧಿಯೊಬ್ಬರ ಕುರಿತು ದ್ವಂದ್ವಾರ್ಥ ನೀಡುವ ಹೇಳಿಕೆಯನ್ನು ಬಳಸಿದ್ದಾರೆ ಎಂಬ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಚೇರಿಯ ವರದಿ ಆಧರಿಸಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.