ADVERTISEMENT

ತಂದೆಯೊಂದಿಗೆ ಜಗಳ: ಗಡಿ ದಾಟಿ ಭಾರತಕ್ಕೆ ಬಂದ ಪಾಕ್‌ ಮಹಿಳೆ

ಪಿಟಿಐ
Published 17 ಡಿಸೆಂಬರ್ 2025, 13:27 IST
Last Updated 17 ಡಿಸೆಂಬರ್ 2025, 13:27 IST
   

ಮೆಂಧರ್/ ಜಮ್ಮು: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ತಂದೆಯೊಂದಿಗೆ ಜಗಳ ಮಾಡಿಕೊಂಡು, ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಪ್ರವೇಶಿಸಿದ ಪಾಕಿಸ್ತಾನದ ಮಹಿಳೆಯನ್ನು ಭಾರತೀಯ ಸೇನೆ ಬುಧವಾರ ವಶಕ್ಕೆ ಪಡೆದಿದೆ.

ಮಹಿಳೆಯನ್ನು ಪಿಒಕೆಯ ಕೋಟ್ಲಿ ಜಿಲ್ಲೆಯ ಗಿಮ್ಮಾ ನಿವಾಸಿ ಶೆಹನಾಜ್‌ ಅಖ್ತರ್‌ (35) ಎಂದು ಗುರುತಿಸಲಾಗಿದೆ. ಪಾಕಿಸ್ತಾನದ ಪ್ರಜೆಯಾದ ಶೆಹನಾಜ್‌ ಅವರನ್ನು ಬಾಗಲಕೋಟ್‌ ಸೆಕ್ಟರ್‌ನ ಡಬ್ಬಿ ಫಾರ್ವಡ್‌ ಪ್ರದೇಶದಿಂದ ಮಂಗಳವಾರ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೆಹನಾಜ್‌ ತಂದೆಯೊಂದಿಗೆ ಜಗಳವಾಡಿಕೊಂಡು ಗಡಿ ನಿಯಂತ್ರಣ ರೇಖೆಯ ಕಡೆ ಓಡಿಬಂದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಹಿಳೆಯನ್ನು ಇನ್ನೂ ಪೊಲೀಸರಿಗೆ ಹಸ್ತಾಂತರಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.