ಚಂಬಾ: ಶನಿವಾರ ನಡೆದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಸಂದರ್ಭ ಚಂಬಾ ಜಿಲ್ಲೆಯ ಭರ್ಮೌರ್ ವಿಧಾನಸಭಾ ಕ್ಷೇತ್ರದ ಚಸಕ್ ಭಟೋರಿ ಮತಗಟ್ಟೆಗೆ ತೆರಳಲು ಚುನಾವಣಾ ಸಿಬ್ಬಂದಿ ಹಿಮಚ್ಛಾದಿತ ಪರ್ವತದ ಮೇಲೆ ನಡೆದು ಹೋಗುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕರ್ಷಣೆಗೆ ಕಾರಣವಾಗಿದೆ.
ಈ ವಿಡಿಯೊದಲ್ಲಿ ಚುನಾವಣಾ ಸಿಬ್ಬಂದಿ ಮತಕೇಂದ್ರ ತಲುಪಲು ಹಿಮದ ಮೇಲೆ 6 ಗಂಟೆಗಳ ಕಾಲ 15ಕಿ.ಮೀ ಕ್ರಮಿಸಿರುವ ದೃಶ್ಯವಿದೆ.
ಈ ಮತಕೇಂದ್ರದಲ್ಲಿ 93 ಮಂದಿ ಮತದಾರರಿದ್ದು, ದಪ್ಪನಾದ ಉಡುಪುಗಳನ್ನು ಧರಿಸಿದ್ದ ಸಿಬ್ಬಂದಿ ಹಿಮಪಾತದ ನಡುವೆ ನಡೆದು ಸಾಗಿದ್ದಾರೆ. ಇಲ್ಲಿ ಶೇಕಡ 75.26ರಷ್ಟು ಮತದಾನವಾಗಿದೆ.
ಒಟ್ಟಾರೆ, ಹಿಮಾಚಲಪ್ರದೇಶದಲ್ಲಿ ಶೇಕಡ 66ರಷ್ಟು ಮತದಾನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.