ವಶಪಡಿಸಿಕೊಂಡ ಭೂಮಿಯಲ್ಲಿ ಪೊಲೀಸ್ ಪ್ರಕಟಣೆ
ಎಕ್ಸ್ ಚಿತ್ರ
ಪೂಂಚ್: ಪಾಕಿಸ್ತಾನದಿಂದ ನಿರ್ವಹಿಸಲಾಗುತ್ತಿದ್ದ ಮೂವರು ಉಗ್ರರಿಗೆ ಸೇರಿದ 1.85 ಎಕರೆ ಭೂಮಿಯನ್ನು ಪೂಂಚ್ ಜಿಲ್ಲೆಯ ಖಸ್ಬಾ ಹಾಗೂ ಕಿರ್ನಿ ಗ್ರಾಮದಲ್ಲಿ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.
ಈ ಭೂಮಿಯ ಮೌಲ್ಯ ಸುಮಾರು ₹ 28 ಲಕ್ಷ.
ಈ ಸುದ್ದಿಯನ್ನು ‘ಎಎನ್‌ಐ’ ವರದಿ ಮಾಡಿದೆ.
ಈ ಭೂಮಿ ಜನಬ್‌ದೀನ್, ಮೊಹಮ್ಮದ್ ಲತೀಫ್ ಹಾಗೂ ಮೊಹಮ್ಮದ್ ಬಶೀರ್ ಅಲಿಯಾಸ್ ಟಿಕ್ಕಾ ಖಾನ್‌ಗೆ ಸೇರಿದವು.
ಈ ಮೂವರೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಪಲಾಯನ ಮಾಡಿದ್ದಾರೆ. ಇವರು ಪೂಂಚ್ ಸೇರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದ ಹರಡುವಲ್ಲಿ, ಶಾಂತಿ ಕದಡುವಲ್ಲಿ, ಸಾಮಾಜಿಕ ಸಾಮರಸ್ಯ ಹಾಳು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.