ADVERTISEMENT

ಪಶ್ಚಿಮ ಬಂಗಾಳ ಹಿಂಸಾಚಾರ: ಚುನಾವಣೆ ನಂತರದಲ್ಲಿ 16 ಮಂದಿ ಸಾವು–ಮಮತಾ

ಏಜೆನ್ಸೀಸ್
Published 6 ಮೇ 2021, 11:10 IST
Last Updated 6 ಮೇ 2021, 11:10 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ರಾಜ್ಯದಲ್ಲಿ ಚುನಾವಣೆಯ ನಂತರದ ಹಿಂಸಾಚಾರಗಳಲ್ಲಿ ಹದಿನಾರು ಜನರು ಸಾವಿಗೀಡಾಗಿದ್ದಾರೆ. ಅವರ ಕುಟುಂಬದವರಿಗೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.

ಚುನಾವಣಾ ಆಯೋಗದ ಕಾನೂನು ಮತ್ತು ಸುವ್ಯವಸ್ಥೆ ಅಡಿಯಲ್ಲಿ 16 ಮಂದಿಯ ಹತ್ಯೆಯಾಗಿದೆ. ಅವರಲ್ಲಿ ಅರ್ಧದಷ್ಟು ಜನ ಟಿಎಂಸಿ ಮತ್ತು ಇನ್ನರ್ಧದಷ್ಟು ಜನರು ಬಿಜೆಪಿಗೆ ಸೇರಿದವರು. ಒಬ್ಬ ಸಂಯುಕ್ತ ಮೋರ್ಚಾಗೆ ಸೇರಿದ ವ್ಯಕ್ತಿ. ತಾರತಮ್ಯ ಮಾಡದೆ ಆ ಎಲ್ಲರ ಕುಟುಂಬದವರಿಗೂ ₹ 2 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಮಮತಾ ಪ್ರಕಟಿಸಿದರು.

ಬಿಜೆಪಿಯ ಮುಖಂಡರು ಇಲ್ಲಿ ಸುತ್ತುತ್ತಿದ್ದಾರೆ ಮತ್ತು ಪ್ರಚೋದಿಸುವ ಕಾರ್ಯಗಳಲ್ಲಿ ತೊಡಗಿದ್ದಾರೆ. ಹೊಸ ಸರ್ಕಾರ ರಚನೆಯಾಗಿ 24 ಗಂಟೆಗಳೂ ಕಳೆದಿಲ್ಲ, ಅದಾಗಲೇ ಅವರು ಪತ್ರಗಳು, ತಂಡಗಳನ್ನು ಕಳುಹಿಸುತ್ತಿದ್ದಾರೆ, ಮುಖಂಡರು ಬರುತ್ತಿದ್ದಾರೆ. ಅವರು ಜನರ ಆದೇಶವನ್ನು ಸ್ವೀಕರಿಸಲು ಸಿದ್ಧರಿಲ್ಲ, ಜನತಾ ಆದೇಶವನ್ನು ಒಪ್ಪುವಂತೆ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಬಿಜೆಪಿ ಮುಖಂಡರನ್ನು ಟೀಕಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.