ADVERTISEMENT

ABP ಸಿ–ವೋಟರ್‌ ಸಮೀಕ್ಷೆ: ಪುದುಚೇರಿ, ಅಸ್ಸಾಂನಲ್ಲಿ ಬಿಜೆಪಿ, ಬಂಗಾಳದಲ್ಲಿ ಹಣಾಹಣಿ

ಚುನಾವಣೆ ಪೂರ್ವ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 16:54 IST
Last Updated 27 ಫೆಬ್ರುವರಿ 2021, 16:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ:ತೀವ್ರ ಕುತೂಹಲ ಕೆರಳಿಸಿರುವ ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಲೇ ಚುನಾವಣ ಪೂರ್ವ ಸಮೀಕ್ಷೆಗಳು ಹೊರ ಬಿದ್ದಿವೆ.

ಎಬಿಪಿ ಸಿ–ವೋಟರ್‌ ಸಮೀಕ್ಷೆಯಲ್ಲಿ ಮೊದಲ ಬಾರಿಗೆ ಪುದುಚೇರಿಯಲ್ಲಿ ಕಮಲ ಅರಳಲಿದ್ದು, ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

ತೀವ್ರ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯಲಿದೆ. ಕೇರಳದಲ್ಲಿ ಮತ್ತೆ ಎಡರಂಗ ಅಧಿಕಾರ ಹಿಡಿದರೆ, ತಮಿಳುನಾಡು ಡಿಎಂಕೆ ಪಾಲಾಗಲಿದೆ ಎಂದು ಎಬಿಪಿ ಸಿ–ವೋಟರ್‌ ಸಮೀಕ್ಷೆ

ADVERTISEMENT

ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಆಸೆಗೆ ಮತ್ತೆ ಹಿನ್ನಡೆ ಉಂಟಾಗಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಮೈತ್ರಿಯೊಂದಿಗೆ ಪಕ್ಷದ ವರ್ಚಸ್ಸು ವೃದ್ಧಿಯಾಗಲಿದೆ. ಕೇರಳದಲ್ಲಿ ಬಿಜೆಪಿ ಎರಡಂಕಿ ಸ್ಥಾನಗಳನ್ನು ಪಡೆಯದೇ ಹೋದರು ಮತಗಳಿಕೆ ಪ್ರಮಾಣ ಹೆಚ್ಚಲಿದೆ ಎಂದು ಸಮೀಕ್ಷೆ ಹೇಳಿದೆ.

ತಮಿಳುನಾಡು –234(ಒಟ್ಟು ಸ್ಥಾನಗಳು)
ಡಿಎಂಕೆ– ಕಾಂಗ್ರೆಸ್‌ –154–162
ಎಐಎಡಿಎಂಕೆ– ಬಿಜೆಪಿ –56–66
ಇತರರು – 8–20

ಕೇರಳ –140(ಒಟ್ಟು ಸ್ಥಾನಗಳು)
ಎಲ್‌ಡಿಎಫ್‌ – 83–91
ಯುಡಿಎಫ್– 47–51
ಬಿಜೆಪಿ – 0–2
ಇತರರು– 0–2

ಪಶ್ಚಿಮ ಬಂಗಾಳ – 294(ಒಟ್ಟು ಸ್ಥಾನಗಳು)
ಟಿಎಂಸಿ –148–164
ಬಿಜೆಪಿ –92–108
ಕಾಂಗ್ರೆಸ್‌, ಎಡರಂಗ –31-39

ಅಸ್ಸಾಂ –126(ಒಟ್ಟು ಸ್ಥಾನಗಳು)
ಬಿಜೆಪಿ – 68–76
ಕಾಂಗ್ರೆಸ್‌ –43–51
ಇತರೆ –5–10

ಪುದುಚೇರಿ –30 (ಒಟ್ಟು ಸ್ಥಾನಗಳು)
ಬಿಜೆಪಿ –17–21
ಕಾಂಗ್ರೆಸ್‌ –08–12
ಇತರೆ –1 –3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.