ADVERTISEMENT

ಜೈಲು ಸಿಬ್ಬಂದಿಗೆ ಶೀಘ್ರವೇ ಕ್ಯಾಮೆರಾ

ಪಾರದರ್ಶಕತೆ, ಉತ್ತರಾದಾಯಿತ್ವ, ಭದ್ರತೆ ಮತ್ತು ಮಾನವ ಹಕ್ಕಗಳ ರಕ್ಷಣೆಗಾಗಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 6:50 IST
Last Updated 9 ನವೆಂಬರ್ 2020, 6:50 IST
ಬಾಡಿ ವಾರ್ನ್ ಕ್ಯಾಮೆರಾ ಧರಿಸಿರುವ ಟ್ರಾಫಿಕ್ ಪೊಲೀಸ್ (ಸಂಗ್ರಹ ಚಿತ್ರ)
ಬಾಡಿ ವಾರ್ನ್ ಕ್ಯಾಮೆರಾ ಧರಿಸಿರುವ ಟ್ರಾಫಿಕ್ ಪೊಲೀಸ್ (ಸಂಗ್ರಹ ಚಿತ್ರ)   

ನವದೆಹಲಿ: ‘ಪಾರದರ್ಶಕತೆ, ಉತ್ತರದಾಯಿತ್ವ, ಭದ್ರತೆ ಮತ್ತು ಮಾನವ ಹಕ್ಕುಗಳ ರಕ್ಷಣೆ‘ಗಾಗಿ ಜೈಲುಗಳಲ್ಲಿ ಕೈದಿಗಳೊಂದಿಗೆ ನಡೆಯುವ ಪ್ರಕ್ರಿಯೆಯನ್ನು ದಾಖಲಿಸಲು ಜೈಲು ಸಿಬ್ಬಂದಿ ಕ್ಯಾಮೆರಾವನ್ನೂ (‘ಬಾಡಿ –ವೊರ್ನ್ – ಕ್ಯಾಮೆರಾ‘– ಬಿಡಬ್ಲ್ಯುಸಿಗಳನ್ನು)ಶೀಘ್ರದಲ್ಲೇ ಧರಿಸಲಿದ್ದಾರೆ.

ಪೊಲೀಸ್ ಚಿಂತಕರ ಚಾವಡಿ ಎಂದು ಕರೆಯುವ ‘ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ‘ ಎಲ್ಲ ರಾಜ್ಯಗಳಿಗೆ ಬಿಡಬ್ಲ್ಯೂಸಿ ಯೋಜನೆಯನ್ನು ಹಂತಹಂತವಾಗಿ ಪ್ರಾರಂಭಿಸಲು ಸೂಚಿಸಿದೆ ಮತ್ತು ಅದರ ಅನುಷ್ಠಾನದ ಬಗ್ಗೆ ಮಾದರಿ ಕಾರ್ಯಾಚರಣೆ ಮಾರ್ಗಸೂಚಿ(ಎಸ್‌ಒಪಿ)ಯನ್ನು ಪ್ರಕಟಿಸಿದೆ. ಸದ್ಯ ಈ ಕ್ಯಾಮೆರಾಗಳನ್ನು ಪ್ರಮುಖವಾಗಿ ಸಂಚಾರಿ ಪೊಲೀಸರು ಮತ್ತು ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಬಳಸುತ್ತಿದ್ದಾರೆ.

‘ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ಹಂತ ಹಂತವಾಗಿ ಬಿಡಬ್ಲ್ಯುಸಿ ಯೋಜನೆಯನ್ನು ಪ್ರಾರಂಭಿಸುವಂತೆ ಶಿಫಾರಸು ಮಾಡಲಾಗಿದೆ. ಆದರೆ, ಪ್ರಾಯೋಗಿಕ ಯೋಜನೆಗಾಗಿ ಎಚ್ಚರಿಕೆಯಿಂದ ಕ್ಷೇತ್ರಗಳನ್ನು ಆಯ್ದುಕೊಳ್ಳಬೇಕು‘ ಎಂದು ಬಿಪಿಆರ್‌ಡಿ ತಿಳಿಸಿದೆ.

ADVERTISEMENT

ಈ ಬಿಡಬ್ಲ್ಯುಸಿಗಳು ಕಾರಾಗೃಹದಲ್ಲಿರುವ ಕೈದಿಗಳು ಮತ್ತು ಸಿಬ್ಬಂದಿಗೆ ಸುರಕ್ಷತೆ ಒದಗಿಸುವ ಜತೆಗೆ, ಮಾನವ ಹಕ್ಕುಗಳ ರಕ್ಷಣೆಗೆ ನೆರವಾಗುತ್ತದೆ. ಜತೆಗೆ, ಹೆಚ್ಚುವರಿ ಸಾಕ್ಷ್ಯಗಳನ್ನು ಒದಗಿಸುತ್ತದೆ‘ ಎಂದು ಟಿಪ್ಪಣಿಯಲ್ಲಿ ಉಲ್ಲೆಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.