ಚಂಡೀಗಢ: ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯು ನಕಲಿ ವಿಡಿಯೊ ಹಂಚುವ ಮೂಲಕ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಚಾರಿತ್ರ್ಯಹರಣದಲ್ಲಿ ನಿರತವಾಗಿದೆ ಎಂದು ಆಮ್‌ಆದ್ಮಿ ಪಕ್ಷ ಕಿಡಿಕಾರಿದೆ.
ಮೊರಿಂಡಾ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಸಂಸದ ಹಾಗೂ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್, ‘ಕೃತಕ ಬುದ್ಧಿಮತ್ತೆಯ ಮೂಲಕ ರಚಿಸಿದ ನಕಲಿ ವಿಡಿಯೊ ಬಳಸಿಕೊಂಡು, ಮುಖ್ಯಮಂತ್ರಿ ಮಾನ್ ಅವರ ಚಾರಿತ್ರ್ಯಹರಣದಲ್ಲಿ ಬಿಜೆಪಿ ತೊಡಗಿದೆ’ ಎಂದು ಆರೋಪಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಆಶ್ಲೀಲ ವಿಷಯ ಹರಡಿದ ಆರೋಪದ ಮೇಲೆ ಕೆನಡ ಮೂಲದ ಜಗ್‌ಮನ್ ಸಮ್ರ ವಿರುದ್ಧ ಪಂಜಾಬ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.