ADVERTISEMENT

ಪಂಜಾಬ್: ಶಾಲಾಭಿವೃದ್ಧಿಯಲ್ಲಿ ಪಾಲಕರ ಪಾತ್ರ ಹೆಚ್ಚಳ ಪ್ರಸ್ತಾವಕ್ಕೆ ಸಂಪುಟ ಅಸ್ತು

ಪಿಟಿಐ
Published 21 ಮಾರ್ಚ್ 2025, 11:23 IST
Last Updated 21 ಮಾರ್ಚ್ 2025, 11:23 IST
ಭಗವಂತ ಮಾನ್
ಭಗವಂತ ಮಾನ್   

ಚಂಡೀಗಢ: ಪಂಜಾಬ್‌ನ ಮಕ್ಕಳ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಅಧಿನಿಯಮ 2011ಕ್ಕೆ ತಿದ್ದುಪಡಿ ತಂದು ಶಾಲಾಭಿವೃದ್ಧಿಯಲ್ಲಿ ಪಾಲಕರ ಪಾತ್ರ ಹೆಚ್ಚಿಸುವ ಕ್ರಮಕ್ಕೆ ಪಂಜಾಬ್‌ನ ಕ್ಯಾಬಿನೆಟ್‌ ಶುಕ್ರವಾರ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಅದ್ಯಕ್ಷತೆಯಲ್ಲಿ ನಡೆದ ಪಂಜಾಬ್‌ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

‘ಶಾಲಾ ನಿರ್ವಹಾ ಸಮಿತಿಯಲ್ಲಿ ಪಾಲಕರ ಮತ್ತು ಸಮುದಾಯದ ಪಾಲುದಾರಿಕೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಶಾಲೆಗಳ ಸಮಗ್ರ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದೆನ್ನಲಾಗಿದೆ.

ADVERTISEMENT

‘ಸರ್ಕಾರಿ ಶಾಲಾಭಿವೃದ್ಧಿ ಸಮಿತಿಯಲ್ಲಿ ಈಗಿರುವ 12 ಸದಸ್ಯರ ಸಂಖ್ಯೆಯನ್ನು 16ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ ಶಾಲಾ ಮಕ್ಕಳ ಪಾಲಕರ ಪ್ರತಿನಿಧಿಗಳಾಗಿ 12 ಹಾಗೂ ಶಿಕ್ಷಣ, ಕ್ರೀಡೆ, ಪಠ್ಯೇತರ ಚಟುವಟಿಕೆಗಳ ಕ್ಷೇತ್ರದಿಂದ ನಾಲ್ವರು ಇರಲಿದ್ದಾರೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.