ADVERTISEMENT

ಪಂಜಾಬ್ ಚುನಾವಣೆ: ಜಾತಿ, ಧರ್ಮಗಳನ್ನು ಮೀರಿ ಮತ ಚಲಾಯಿಸುವಂತೆ ಮನೀಶ್ ತಿವಾರಿ ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2022, 5:19 IST
Last Updated 20 ಫೆಬ್ರುವರಿ 2022, 5:19 IST
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ   

ಲೂಧಿಯಾನ: ಪಂಜಾಬ್ ವಿಧಾನಸಭೆ ಚುನಾವಣೆಯನ್ನುದ್ದೇಶಿಸಿ ಮಾತನಾಡಿರುವ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಾಗ ಜಾತಿ ಮತ್ತು ಧರ್ಮದ ಚೌಕಟ್ಟನ್ನು ಮೀರಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.

ಲೂಧಿಯಾನದಲ್ಲಿ ಮತ ಚಲಾಯಿಸಿದ ನಂತರ ಮಾತನಾಡಿರುವ ತಿವಾರಿ, ಯುವಕರು ಮತ್ತು ರೈತರ ಸಮಸ್ಯೆಗಳು ಸೇರಿದಂತೆ ಪಂಜಾಬ್‌ ಎದುರು ಇರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಜಾತಿ ಮತ್ತು ಧರ್ಮವನ್ನು ಮೀರಿ ಜನರು ಈ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

ಜನರು ತಮ್ಮ ಸಾಂವಿಧಾನಿಕ ಹಕ್ಕು ಮತ್ತು ಮೌಲ್ಯಯುತವಾದ ಮತಗಳನ್ನು ಚಲಾಯಿಸಬೇಕು ಎಂದುಮುಖ್ಯಮಂತ್ರಿ ಚರಣ್‌ಜಿತ್ ಚನ್ನಿ ಅವರೂ ಮನವಿ ಮಾಡಿದ್ದಾರೆ.

ADVERTISEMENT

117ಸದಸ್ಯ ಬಲದಪಂಜಾಬ್ ವಿಧಾನಸಭೆಗೆ ಇಂದು (ಫೆ.20)ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ.2.14 ಕೋಟಿ ಮತದಾರು, ಕಣದಲ್ಲಿರುವ1,304 ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.