ADVERTISEMENT

ಪ್ರವಾಹದಿಂದ ಹಾನಿಗೊಳಗಾದ ಸೈಕಲ್‌: ಬಾಲಕನ ಅಳಲಿಗೆ ಕರಗಿದ ರಾಹುಲ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 13:17 IST
Last Updated 17 ಸೆಪ್ಟೆಂಬರ್ 2025, 13:17 IST
   

ಚಂಡೀಗಢ: ಪಂಜಾಬಿನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತನ್ನ ಸೈಕಲ್‌ ಹಾಳಾಗಿರುವುದಾಗಿ ಅಳುತ್ತಿದ್ದ 6 ವರ್ಷದ ಬಾಲಕನಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೊಸ ಸೈಕಲ್‌ ಅನ್ನು ಕೊಡಿಸುವುದಾಗಿ ಭರವಸೆ ನೀಡಿದ್ದರು.

ರಾಹುಲ್‌ ನೀಡಿದ್ದ ಭರವಸೆಯಂತೆ ಬಾಲಕನಿಗೆ ಹೊಸ ಸೈಕಲ್‌ ಅನ್ನು ಪೂರೈಸಿದ್ದಾರೆ.

ಈ ಸಂಬಂಧ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡು ಮಾಹಿತಿ ನೀಡಿದೆ.

ಬಾಲಕ (ಅಮೃತ್‌ ಪಾಲ್‌) ವಿಡಿಯೊ ಕರೆ ಮೂಲಕ ರಾಹುಲ್‌ ಗಾಂಧಿ ಅವರಿಗೆ ಹೊಸ ಸೈಕಲ್‌ ಕೊಟ್ಟಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ರಾಹುಲ್‌ 'ಸೈಕಲ್‌ ಚೆನ್ನಾಗಿದೆಯೇ' ಎಂದು ಕೇಳಿರುವ ದೃಶ್ಯಗಳು ವಿಡಿಯೊದಲ್ಲಿದೆ.

ಸೆಪ್ಟೆಂಬರ್ 15ರಂದು ಪಂಜಾಬ್‌ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಮೃತಸರದ ಘೋನೆವಾಲ್ ಗ್ರಾಮದಲ್ಲಿರುವ ರವಿದಾಸ್ ಸಿಂಗ್ ಮನೆಗೆ ರಾಹುಲ್‌ ಭೇಟಿ ನೀಡಿದ್ದರು. ಈ ವೇಳೆ ಅಮೃತ್‌ ಪಾಲ್‌ ಪ್ರವಾಹದಿಂದಾಗಿ ನನ್ನ ಸೈಕಲ್‌ ಹಾಳಾಗಿದೆ ಎಂದು ರಾಹುಲ್‌ರನ್ನು ತಬ್ಬಿ ಅತ್ತುಕೊಂಡಿದ್ದನು. ಇದೇ ವೇಳೆ ರಾಹುಲ್‌ ಹೊಸ ಸೈಕಲ್‌ ಕೊಡಿಸುವುದಾಗಿ ಭರವಸೆ ನೀಡಿದ್ದರು.

ಪ್ರವಾಹ ಪರಿಸ್ಥಿತಿಯಿಂದಾಗಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳ ಪೈಕಿ ಘೋನೆವಾಲ್ ಗ್ರಾಮವು ಒಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.