ADVERTISEMENT

ನಾನು ರಾಜನಾಗಲು ಬಯಸಲ್ಲ, ಆ ಪರಿಕಲ್ಪನೆಯೇ ಇಷ್ಟವಿಲ್ಲ: ರಾಹುಲ್‌ ಗಾಂಧಿ

ಪಿಟಿಐ
Published 2 ಆಗಸ್ಟ್ 2025, 12:54 IST
Last Updated 2 ಆಗಸ್ಟ್ 2025, 12:54 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಪಿಟಿಐ

ನವದೆಹಲಿ: ‘ನಾನು ರಾಜನಾಗಲು ಬಯಸುವುದಿಲ್ಲ. ಆ ಪ‍ರಿಕಲ್ಪನೆಯನ್ನೇ ವಿರೋಧಿಸುತ್ತೇನೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ADVERTISEMENT

ಶನಿವಾರ ಇಲ್ಲಿನ ವಿಜ್ಞಾನ ಭವನದ ಸಭಾಗಂಣದಲ್ಲಿ ಕಾಂಗ್ರೆಸ್‌ ಕಾನೂನು ಘಟಕ ಹಮ್ಮಿಕೊಂಡಿದ್ದ ‘ಸಾಂವಿಧಾನಿಕ ಸವಾಲುಗಳು: ದೃಷ್ಟಿಕೋನ ಮತ್ತು ಮಾರ್ಗಗಳು’ ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.

ಅವರು ಭಾಷಣ ಆರಂಭಿಸುತ್ತಿದ್ದಂತೆಯೇ ಸಭಾಂಗಣದಲ್ಲಿ ಕುಳಿತಿದ್ದ ಸಭಿಕರು ‘ದೇಶದ ರಾಜ ಹೇಗಿರಬೇಕು? ರಾಹುಲ್ ಗಾಂಧಿ ಹಾಗಿರಬೇಕು’(ಈಸ್ ದೇಶ್ ಕಾ ರಾಜಾ ಕೈಸಾ ಹೋ, ರಾಹುಲ್ ಗಾಂಧಿ ಜೈಸಾ ಹೋ) ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌, ‘ಇಲ್ಲ ಬಾಸ್.. ನಾನು ರಾಜನಲ್ಲ. ನಾನು ರಾಜನಾಗಲು ಬಯಸುವುದಿಲ್ಲ. ನಾನು ಅದರ ವಿರುದ್ಧ. ಆ ಪರಿಕ್ಷಲನೆಯನ್ನೇ ವಿರೋಧಿಸುತ್ತೇನೆ’ ಎಂದು ಹೇಳಿದ್ದಾರೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ರಾಜ’ ಎಂದು ಟೀಕಿಸಿದ್ದ ರಾಹುಲ್ ಗಾಂಧಿ, ಅವರು ಜನರ ಧ್ವನಿಯನ್ನು ಆಲಿಸುತ್ತಿಲ್ಲ ಎಂದು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.